• first
  second
  third
  previous arrow
  next arrow
 • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜೀವನದ ಶಿಸ್ತನ್ನು ಕಲಿಸುತ್ತಿದೆ; ಬಾಬು ನಾಯ್ಕ

  300x250 AD

  ಸಿದ್ದಾಪುರ:ಪಟ್ಟಣದ ಬಾಲಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿದ್ದಾಪುರ ಮತ್ತು ಚಂದನ ಜ್ಞಾನವಿಕಾಸ ಕೇಂದ್ರ ಸಿದ್ದಾಪುರ ವಲಯ ಇವರ ಸಹಭಾಗಿತ್ವದಲ್ಲಿ ಐದೃಷ್ಟಿ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ ವಿಶೇಷ ಸುಸಜ್ಜಿತ ಸಂಚಾರಿ ವಾಹನದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಬುಧವಾರ ನಡೆಯಿತು.

  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮೂಹದ ಅಭಿವೃದ್ಧಿ ಮತ್ತು ಕುಟುಂಬದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಸಂಘದ ಸದಸ್ಯರಿಗೆ ಸಾಲವನ್ನು ಮಾತ್ರ ನೀಡುತ್ತಿಲ್ಲ. ಜೀವನದ ಶಿಸ್ತನ್ನು ಕಲಿಸುತ್ತಿದೆ. ಜ್ಞಾನ ವಿಕಾಸ ಕೇಂದ್ರ ಮಹಿಳೆಯರನ್ನು ಸೃಜನಶೀಲರನ್ನಾಗಿ ಮಾಡುವುದಲ್ಲದೇ ಆದರ್ಶ ನಾರಿಯನ್ನಾಗಿ ಮಾಡಿ ಸ್ವಾವಲಂಬಿ ಜೀವನ ನಡೆಸುವುದಕ್ಕೆ ವಿವಿಧ ಮಾಹಿತಿ ಶಿಬಿರವನ್ನು ನಡೆಸುತ್ತಿದೆ. ಪ್ರತಿಯೊಬ್ಬರಿಗೂ ಕಣ್ಣಿನ ಆರೋಗ್ಯ ಮುಖ್ಯವಾಗಿರುವುದರಿಂದ ಉಚಿತವಾಗಿ ಸಾರ್ವಜನಿಕರಿಗೆ ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.

  ಐದೃಷ್ಟಿ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇದರ ವ್ಯವಸ್ಥಾಪಕ ಮುರಳಿ ಅವರು ಉಚಿತ ಕಣ್ಣಿನ ತಪಾಸಣೆ ಕುರಿತು ಮಾತನಾಡಿದರು. ಹಿರಿಯ ವ್ಯವಸ್ಥಾಪಕ ಸಂದೀಪ ನಾಯ್ಕ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ತಾಲೂಕು ಯೋಜನಾಧಿಕಾರಿ ಪ್ರಭಾಕರ ನಾಯ್ಕ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷೆ ಗೀತಾ ನಾಯ್ಕ ಅಧ್ಯಕ್ಷತೆವಹಿಸಿದ್ದರು.

  300x250 AD

  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಜ್ಯೋತಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ವಿಜಯಾ ವಂದಿಸಿದರು. ಜ್ಞಾನವಿಕಾಸ ಕೇಂದ್ರದ ಪ್ರತಿಭಾ ನಿರ್ವಹಿಸಿದರು.

  ಮುರಳಿ, ಗೀತಾ ನಾಯ್ಕ, ಪ್ರಭಾಕರ ನಾಯ್ಕ, ಜ್ಯೋತಿ, ರಮೇಶ ಹೆಗಡೆ ಹಾರ್ಸಿಮನೆ,ಪ್ರತಿಭಾ ಇದ್ದರು.

  Share This
  300x250 AD
  300x250 AD
  300x250 AD
  Back to top