• Slide
  Slide
  Slide
  previous arrow
  next arrow
 • ಮಾ.26 ರಿಂದ ಹೊನಗದ್ದೆಯ ವೀರಭದ್ರ ದೇವಸ್ಥಾನದ ನೂತನ ಮಂದಿರದ ಪ್ರತಿಷ್ಠಾಪನೆ

  300x250 AD

  ಯಲ್ಲಾಪುರ:ತಾಲೂಕಿನ ಹೊನಗದ್ದೆಯ ವೀರಭದ್ರ ದೇವಸ್ಥಾನದ ನೂತನ ಶಿಲಾ ಮಂದಿರದ ಪ್ರತಿಷ್ಠಾ ಮಹೋತ್ಸವ ಮಾ.26 ರಿಂದ 28 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಿ.ಜಿ.ಭಟ್ಟ ಹೇಳಿದರು.

  ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರ ಪುರೋಹಿತರಾದ ವಿಘ್ನೇಶ್ವರ ಕಲ್ಲಪ್ಪ ಗೋಕರ್ಣ ಹಾಗೂ ಗಣಪತಿ ಭಟ್ಟ ಹಿರೇ ಅವರ ಆಚಾರ್ಯತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಚಿಂತನೆ ಉಪನ್ಯಾಸ, ರಾಷ್ಟ್ರಚಿಂತನ ಉಪನ್ಯಾಸ, ಭಕ್ತಿ ಸಂಗೀತ, ಭಕ್ತಿ ತರಂಗ ಕಾರ್ಯಕ್ರಮ, ಭರತನಾಟ್ಯ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಿಸಿದರು.

  ಸುಮಾರು 7-8 ಶತಮಾನಗಳ ಇತಿಹಾಸ ಹೊಂದಿದ್ದ ವೀರಭದ್ರ ದೇವಸ್ಥಾನ ಪ್ರಭಾವಿ ಶಕ್ತಿ ಕೇಂದ್ರವಾಗಿದ್ದು, ಗತವೈಭವವನ್ನು ಸಾರುವ ಅನೇಕ ಕುರುಹುಗಳು ಸುತ್ತಮುತ್ತ ದೊರೆತಿವೆ. ಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ಭಕ್ತರು, ದಾನಿಗಳ ಸಹಕಾರದಿಂದ ಶಿಲಾಮಯವಾಗಿ ನಿರ್ಮಿಸಲಾಗಿದೆ. 60 ಲಕ್ಷ ರೂ ವೆಚ್ಚದಲ್ಲಿ ಶಿಲಾಮಯ ದೇವಸ್ಥಾನ ನಿರ್ಮಾಣಗೊಂಡಿದೆ ಎಂದು ಮಾಹಿತಿ ನೀಡಿದರು.

  300x250 AD

  ದೇವಸ್ಥಾನದ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ಟ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ ಶರ್ಮಾ ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top