• first
    second
    third
    previous arrow
    next arrow
  • ಶನಿವಾರ ಜಾತ್ರಾ ಚಪ್ಪರಕ್ಕೆ ರಾಜಕಾರಣಿಗಳ ದಂಡು; ಮಾರಿಕಾಂಬೆಗೆ ನಮಿಸಿದ ಜನಪ್ರತಿನಿಧಿಗಳು

    300x250 AD

    ಶಿರಸಿ: ರಾಜ್ಯಪ್ರಸಿದ್ಧ ಶಿರಸಿ ಜಾತ್ರೆಯ ನಾಲ್ಕನೇ ದಿನವಾದ ಶನಿವಾರ ತಾಯಿ ಮಾರಿಕಾಂಬೆಯ ದರ್ಶನ ಪಡೆಯಲು ರಾಜಕಾರಣಿಗಳ ದಂಡೇ ಬಂದಿತ್ತು.

    ಶನಿವಾರ ಬೆಳಿಗ್ಗೆ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಕುಟುಂಬ ಸಮೇತರಾಗಿ ಜಾತ್ರಾ ಗದ್ದುಗೆ ಆಗಮಿಸಿ, ಶ್ರೀದೇವಿಗೆ ನಮಿಸಿ ಜಗನ್ಮಾತೆಯ ಆಶೀರ್ವಾದ ಪಡೆದರು. ಕ್ಷೇತ್ರದ ಶಾಸಕ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಶನಿವಾರ ಬೆಳಿಗ್ಗೆ ಜಾತ್ರಾ ಚಪ್ಪರಕ್ಕೆ ಬಂದು, ಮಾರಿಕಾಂಬೆಗೆ ನಮಿಸಿ, ದೇವರ ಆಶೀರ್ವಾದ ಪಡೆದರು.

    ರಾಜ್ಯ ಕಾರ್ಮಿಕ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ, ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಕಾರ್ಯಕರ್ತರೊಡಗೂಡಿ ಮಾರಿಕಾಂಬೆಗೆ ನಮಿಸಿ ಶ್ರೀದೇವರ ಕೃಪೆಗೆ ಪಾತ್ರರಾದರು.

    300x250 AD

    ಈ ವೇಳೆ ಶಿರಸಿ ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

    Share This
    300x250 AD
    300x250 AD
    300x250 AD
    Back to top