• first
    second
    third
    previous arrow
    next arrow
  • ಮಾ.20ಕ್ಕೆ ಶಂಕರಮಠದಲ್ಲಿ ‘ಧರಣಿ ಮಂಡಲ’ ನಾಟಕ ಪ್ರದರ್ಶನ

    300x250 AD

    ಸಿದ್ದಾಪುರ: ಒಡ್ಡೋಲಗ ರಂಗ ಪರ್ಯಟನ ಹಿತ್ಲಕೈ ಇವರಿಂದ ಪಟ್ಟಣದ ಶಂಕರಮಠದಲ್ಲಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ರಚನೆಯ ಧರಣಿ ಮಂಡಲ ನಾಟಕ ಪ್ರದರ್ಶನ ಸಂಸ್ಕೃತಿ ಸಂಪದದ ಸಹಕಾರದೊಂದಿಗೆ ಮಾ.20ರಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ಟ ಹೇಳಿದರು.
    ಪಟ್ಟಣದ ಶಂಕರಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಡ್ಡೋಲಗ ಸಂಸ್ಥೆ ಈ ವರ್ಷ ರಾಜ್ಯದ ವಿವಿಧ ಜಿಲ್ಲೆಯ ಯುವ ಕಲಾವಿದರನ್ನು ಒಳಗೊಂಡು ರಂಗ ಪರ್ಯಟನಕ್ಕೆ ಮುಂದಾಗಿದೆ. ಧರಣಿ ಮಂಡಲ ತನ್ನ ಮೂಲ ಸ್ವರೂಪದೊಂದಿಗೆ ಮರು ನಿರೂಪಣೆ ಮತ್ತು ಹೊಸತನದೊಂದಿಗೆ ಬ್ಯಾಲೆ ಮಾದರಿಯಲ್ಲಿ ನಾಟಕ ಕಾಣಿಸಿಕೊಳ್ಳಲಿದೆ. ಈ ಕಾಲದ ಆಶಯವನ್ನು ಒಳಗೊಂಡು ಸತ್ಯಕ್ಕಾಗಿ ಆಗ್ರಹಿಸುವುದಾಗಿದೆ.
    ಗಣಪತಿ ಬಿ.ಹಿತ್ಲಕೈ ಸಂಯೋಜನೆಯಲ್ಲಿ, ಡಾ.ಶ್ರೀಪಾದ ಭಟ್ಟ ನಿರ್ದೇಶನ, ಸಂಗೀತ ಅನುಷ್ ಮತ್ತು ಮುನ್ನ, ನೃತ್ಯ ನೆರವು ಮಂಜುಳಾ ಸುಬ್ರಹ್ಮಣ್ಯ ಪುತ್ತೂರು ಹಾಗೂ ಗಣೇಶ ಭೀಮನಕೋಣೆ ಸಹ ನಿರ್ದೇಶನ ನೀಡಿದ್ದಾರೆ.
    ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ,ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಹಾಗೂ ರಂಗ ತಜ್ಞ ಕಿರಣ ಭಟ್ಟ ಹೊನ್ನಾವರ ನಾಟಕಕ್ಕೆ ಚಾಲನೆ ನೀಡಲಿದ್ದಾರೆ.
    ರಂಗದಲ್ಲಿ ಅರ್ಚನಾ ತೆಂಗಿನಮನೆ, ಸುಮಂತ್ ಅನಾಮಿಕ, ನವ್ಯಾ ಉಪಾಧ್ಯಾಯ,ಸಂಗೀತಾ ಬಿಡೆ, ಯೋಗೀಶ ಕುಣಜಿ, ನವೀನ ಕುಣಜಿ,ಕೇಶವ ಹೆಗಡೆ ಕಿಬ್ಳೆ,ಧಾತ್ರಿ ಹಿತ್ಲಕೈ, ಸಿದ್ದು ಬಂಥನಾಳ ಕಾಣಿಸಿಕೊಳ್ಳಲಿದ್ದಾರೆ. ಗುರುಮೂರ್ತಿ ವರದಾಮೂಲ,ಮುರುಗೇಶ ಬಸ್ತಿಕೊಪ್ಪ, ಗಣಪತಿ ಹೆಗಡೆ ವಡ್ಡಿನಗದ್ದೆ, ಗೋಪಿನಾಥ ಆಚಾರ್ ತಾಂತ್ರಿಕ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
    ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Back to top