• first
  second
  third
  previous arrow
  next arrow
 • ಜಾತ್ರಾ ಪ್ಯಾಟೆಯಲ್ಲಿ ಮಳೆ; ಕಳಚಿಬಿದ್ದ ಗದ್ದುಗೆ ಮುಖಮಂಟಪ; ಮತ್ತೆ ತಿರುಗಿತು ತೊಟ್ಟಿಲು

  300x250 AD

  ಶಿರಸಿ: ಅನಿರೀಕ್ಷಿತ ರಭಸದ ಗಾಳಿ-ಮಳೆಯ ಕಾರಣಕ್ಕೆ ಶಿರಸಿ ಮಾರಿಕಾಂಬಾ ಜಾತ್ರಾ ಮಂಟಪದ ಮುಖ ಮಂಟಪ ಕಳಚಿಬಿದ್ದಿದ್ದು, ಕೆಲವು ಅಂಗಡಿಗಳು ಅಸ್ತವ್ಯಸ್ತಗೊಂಡಿತ್ತು.

  ಶುಕ್ರವಾರ ಸಂಜೆ ಆರಂಭಗೊಂಡ ಗಾಳಿ-ಮಳೆ ಕಾರಣಕ್ಕೆ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ, ಅಂಗಡಿಕಾರರಿಗೆ ಕೆಲಕಾಲ ಸಮಸ್ಯೆ ಎದುರಾಯಿತು. ಘಟನಾಸ್ಥಳಕ್ಕೆ ಸಹಾಯಕ‌ ಆಯುಕ್ತ ದೇವರಾಜ್ ಆರ್, ಡಿಎಸ್ಪಿ ರವಿ ನಾಯಕ, ತಹಶೀಲ್ದಾರ ಎಂ.ಆರ್. ಕುಲಕರ್ಣಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

  ಈ ವೇಳೆ ಮಾತನಾಡಿದ ಸಹಾಯಕ ಆಯಕ್ತ ದೇವರಾಜ್, ಅಮ್ಯೂಸ್ ಮೆಂಟ್ ಗಳು ಇರುವ ಸ್ಥಳವನ್ನು ಕೂಲಂಕಷವಾಗಿ ಪರಿಶೀಲಿಸಿ, ಮುಂದಿನ ಕ್ರಮವನ್ನು ತೆಗೆದುಕೊಳ್ಳುವಂತೆ ಮಾಲೀಕರಿಗೆ ಸೂಚಿಸಲಾಗುವುದು. ಸಾರ್ವಜನಿಕರು ಧೃತಿಗೆಡುವ ಅಗತ್ಯವಿಲ್ಲ ಎಂದರು.

  ರಾತ್ರಿ 8.30 ರ ನಂತರ ಜಾತ್ರಾ ಗದ್ದುಗೆಯು ಮತ್ತೆ ಮೊದಲಿನಂತಾಗಿದ್ದು ತಾಯಿ ದರ್ಶನ, ಹಣ್ಣುಕಾಯಿ ಸೇವೆ, ತೊಟ್ಟಿಲು, ಹ್ಯಾಮರ್ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆಗಳು ಆರಂಭಗೊಂಡಿವೆ.

  300x250 AD

  ಗಾಳಿಯ ರಭಸಕ್ಕೆ ಕೋಟೆಕೆರೆಯಲ್ಲಿ ತೊಟ್ಟಿಲಿನ ಬಕೆಟ್ ಕಳಚಿ ಬಿದ್ದಿದೆ ಎಂಬ ಸುದ್ದಿಗಳು ಹರಡಿತ್ತು. ಆದರೆ ವಿಪರೀತ ಗಾಳಿ ಬೀಸಿದ ಕಾರಣಕ್ಕೆ, ಗಾಳಿ ಪಾಸಾಗಲೆಂದು ಮಾಲೀಕರೇ ತೊಟ್ಟಿಲಿನ ಕೆಲವು ಬಕೆಟ್ ಗಳನ್ನು ಕಳಚಿ ಇಟ್ಟಿದ್ದರು. ಆದರೆ ಇದು ಸಾಮಾಜಿಕ ಜಾಲತಾಣದಲ್ಲಿ ತೊಟ್ಟಿಲೇ ಕಳಚಿ ಬಿದ್ದಿದೆ ಎಂದು ಸುಳ್ಳು ಸುದ್ದಿ ಎಲ್ಲಡೆ ಹರಡಿತ್ತು. ಈ ಹಿನ್ನಲೆಯಲ್ಲಿ ‘e – ಉತ್ತರ ಕನ್ನಡ’ದ ವರದಿಗಾರರು ಸ್ಥಳಕ್ಕೆ ತೆರಳಿ, ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

  ಶ್ರಮಿಕ ವರ್ಗಕ್ಕೆ ಶರಣು:
  ಅಕಾಲಿಕ ಮಳೆ ಸುರಿದ ಹಿನ್ನಲೆಯಲ್ಲಿ ಅಸ್ತವ್ಯಸ್ತಗೊಂಡ ಜಾತ್ರಾ ಪ್ರದೇಶದಲ್ಲಿ ಹಾಜರಿದ್ದು ಸ್ಪಂದಿಸಿದ ದೇವಾಲಯದ ಭಕ್ತವೃಂದ, ಸೇವಾಕಾರ್ಯಕರ್ತರು, ಸ್ಥಳೀಯಾಡಳಿತ, ಪೋಲೀಸ್ ಇಲಾಖೆ, ಹೆಸ್ಕಾಂ ಇಲಾಖೆ ಸೇರಿದಂತೆ ಈ ನಿಟ್ಟಿನಲ್ಲಿ ಶ್ರಮಿಸಿದ ಎಲ್ಲರಿಗೆ ಸಾರ್ವಜನಿಕರು ಪ್ರಶಂಸಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top