• Slide
    Slide
    Slide
    previous arrow
    next arrow
  • ಜಾತ್ರೆಯಲ್ಲಿ ಕಳೆದು ಹೋದವರನ್ನು ಹುಡುಕಿ ಒಂದು ಮಾಡಿದ ಪೊಲೀಸರು; ಸಾರ್ವಜನಿಕರ ಮೆಚ್ಚುಗೆ

    300x250 AD

    ಶಿರಸಿ:ಜಾತ್ರೆ ಎಂದರೆ ಸಾಕು ಜನ ಸಾಗರವೇ ಹರಿದು ಬರುತ್ತದೆ ಇದರೊಂದಿಗೆ ವಸ್ತು‌ಕಳೆದುಕೊಳ್ಳುವುದು, ಮಕ್ಕಳು‌ ಕೈ ತಪ್ಪುವುದು ಸಹಜ. ಆದರೆ ಆ ಸಂದರ್ಭದಲ್ಲಿ ಕಳೆದುಕೊಂಡವರ ದಿಗಿಲು ಮಾತ್ರ ಹೇಳತೀರದು. ಇಂಥವರ ನೆರವಿಗೆ ಇಲ್ಲಿನ ಜಾತ್ರಾ ಪೊಲೀಸರು ಹಗಲು ಇರುಳೆನ್ನದೆ ಸಾತ್ ನೀಡುತ್ತಿದ್ದಾರೆ.

    ಕಳೆದು ಹೋದ‌ ಮಕ್ಕಳಿಗೆ ಪಾಲಕರನ್ನು‌ ಹುಡುಕಿಕೊಡವುದು, ಹಣ ಸಹಿತ ಬ್ಯಾಗ್ ಕಳೆದವರಿಗೆ ಮರಳಿ ನೀಡುವಲ್ಲಿ ಜಾತ್ರಾ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು‌ ಮಾಡುತ್ತಿದ್ದು, ಸಾರ್ವಜನಿಕರ ಶ್ಲಾಘನೆ, ಮೆಚ್ಚುಗೆಗೆ ಕಾರಣವಾಗಿದೆ.

    300x250 AD

    ಅಂದಹಾಗೆ ಈ ಪೊಲೀಸರು ಜಾತ್ರಾ ಒತ್ತಡ‌ ನಿವಾರಣೆ, ಕಳ್ಳರನ್ನು ಕಂಡರೆ ಹಿಡಿದು ಕಂಬಿ ಎಣಿಸುವಂತೆ ಮಾಡುವುದು, ವೃದ್ದರಿಗೆ, ವಿಕಲಚೇತರಿಗೆ ನೆರವಾಗುವುದು ಮಾಡುತ್ತಿದ್ದಾರೆ‌. ಅಷ್ಟು ಮಾತ್ರವಲ್ಲದೆ ಹೆಲ್ಪ್ ಲೈನ್ ಕೆಲಸ‌ ಮಾಡುತ್ತಿರುವುದು ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top