ಯಲ್ಲಾಪುರ:ವ್ಯವಸಾಯ ಸೇವಾ ಸಹಕಾರಿ ಸಂಘ ಉಮಚಗಿ ಇವರ ಆಶ್ರಯದಲ್ಲಿ ರಂಗ ಸಮೂಹ ಮಂಚಿಕೇರಿ ಇವರಿಂದ ಕಾಲಚಕ್ರ ನಾಟಕ ಪ್ರದರ್ಶನ ಮಾ.20 ರ ರವಿವಾರ ಸಂಜೆ 6-30 ಕ್ಕೆ ಸಂಘದ ಸಭಾಭವನದಲ್ಲಿ ನಡೆಯಲಿದೆ.
ಜೈವಂತ ದಳವಿ ಮರಾಠಿ ಮೂಲ ರಚನೆಯ ನಾಟಕ ಇದಾಗಿದ್ದು, ಎಚ್ ಕೆ ಕರ್ಕೆರಾ ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ನಾಟಕ ವೀಕ್ಷಿಸಲು ಬರುವವರಿಗೆ ಕೆಲ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಉಚಿತ ಪಾಸನ್ನು ಸಂಘದಲ್ಲಿ ಮಾ. 20 ರ ಮಧ್ಯಾಹ್ನದ ವರೆಗೆ ಮಾತ್ರ ನೀಡಲಿದ್ದು, ಉಚಿತ ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ನಾಟಕದ ಆರಂಭವಾಗುವ15 ನಿಮಿಷ ಮುಂಚಿತವಾಗಿ ಹಾಜರಿದ್ದು, ಕಡ್ಡಾಯವಾಗಿ ಮೊಬೈಲ್ ಸ್ವಿಚ್ ಆಫ್ ಮಾಡಿರಬೇಕೆಂದು ಪ್ರಕಟಣೆ ತಿಳಿಸಿದೆ.