• first
    second
    third
    previous arrow
    next arrow
  • ತಿಂಡಿ ತಿನಿಸುಗಳಿಗೆ ಮುಗಿ ಬೀಳುತ್ತಿರುವ ಜನ;ಕಲಬೆರಕೆ, ಕೃತಕ ಬಣ್ಣಗಳ ಬಳಕೆ ಬಗ್ಗೆಅಂಗಡಿಕಾರರಿಗೆ ಎಚ್ಚರಿಕೆ

    300x250 AD

    ಶಿರಸಿ: ಪ್ರಸಿದ್ಧ ಶಕ್ತಿ ಸ್ಥಳ ಶಿರಸಿಯ ಮಾರಿಕಾಂಬಾ ಜಾತ್ರಾ ಮಹೋತ್ಸವ ಪ್ರಾರಂಭವಾಗಿದೆ. ಜಾತ್ರೆ ಎಂದೊಡನೆ ತಿನಿಸುಗಳ ಮಾರಾಟವೂ ಬರಪೂರಾಗಾಗಿ ಸಾಗಿದೆ. ಗೋಬಿ ಸ್ಟಾಲ್ ಗಳಿಗೆ ಜನತೆ ಒಂದೆಡೆ ಮುಗಿ ಬೀಳುತ್ತಿದ್ದರೆ. ಇನ್ನೊಂದೆಡೆ ಆರೋಗ್ಯ ಇಲಾಖೆ ಜನತೆಯ ಆರೋಗ್ಯದ ದೃಷ್ಟಿಯಿಂದ ಕಲಬೆರಕೆ ಹಾಗೂ ಬಣ್ಣಗಳ ಬಳಕೆ ಬಗ್ಗೆ ಕಟ್ಟೆಚ್ಚರ ವಹಿಸುತ್ತಿದೆ.

    ಮಾ.16 ರಂದು ಮಾರಿಕಾಂಬಾ ಜಾತ್ರೆಯಲ್ಲಿಯೂ ಸಹ ಸುಮಾರು 15-20 ಹೊಟೆಲ್ ಹಾಗೂ ಗೋಬಿ ಮಂಚೂರಿ ಸ್ಟಾಲ್ ಗಳ ಮೇಲೆ‌ ದಾಳಿ ನಡೆಸಿದ ಅಧಿಕಾರಿಗಳು, ಕೃತಕ ಬಣ್ಣ ಬಳಕೆ ಹಾಗೂ ಟೇಸ್ಟಿಂಗ್ ಪೌಡರ್ ವಶಪಡಿಸಿಕೊಂಡಿದ್ದು, ಅಂಗಡಿಕಾರರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.

    ಅಂಗಡಿಕಾರರಿಗೆ ಸ್ವಚ್ಚತೆಯ ರಕ್ಷಣೆ ಬಗ್ಗೆ ಹಾಗೂ ಸುದ್ದಿ ಪತ್ರಿಕೆಗಳಲ್ಲಿ ತಿಂಡಿಯನ್ನು ಕಟ್ಟಿಕೊಡದಂತೆ ತಿಳಿ ಹೇಳಿದರು. ಅಡಿಗೆ ಗ್ಯಾಸ್ ಉಪಯೋಗದ ಬಗ್ಗೆಯೂ ಮಾಹಿತಿ ನೀಡಲಾಗಿದೆ.

    300x250 AD

    ಈ ಸಂದರ್ಭದಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಅರುಣ ವಿ. ಕಾಶಿಭಟ್ಟ ಹಾಜರಿದ್ದು ಸಮಗ್ರ ತಿಳುವಳಿಕೆ ನೀಡಿದರು. ಇವರ ಜೊತೆಯಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳು, ತಹಶೀಲ್ದಾರ ರೂಪಾ ಜೋಗಳೇಕರ್, ಅಬಕಾರಿ ಅಧಿಕಾರಿ ಡಿ.ಎನ್ ಶಿರ್ಸಿಕರ್, ಹಾಗೂ ಇತರ ಪ್ರಮುಖರು ಹಾಜರಿದ್ದರು.

    Share This
    300x250 AD
    300x250 AD
    300x250 AD
    Back to top