• first
    second
    third
    previous arrow
    next arrow
  • ಹಿಜಾಬ್ ಕುರಿತು ಉಚ್ಚ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ; ತೀರ್ಪು ಉಲ್ಲಂಘಿಸುವವರ ಮೇಲೆ ಕ್ರಮಕ್ಕೆ ಆಗ್ರಹ

    300x250 AD

    ಶಿರಸಿ:ರಾಜ್ಯದ ಶಾಲಾ ವಿದ್ಯಾರ್ಥಿಗಳಲ್ಲಿ ಕೋಮುಭಾವನೆಯನ್ನು ಕೆರಳಿಸಿ, ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ತಮಗೆ ಧಾರ್ಮಿಕ ವಸ್ತ್ರ ಧರಿಸಲು ವಿಶೇಷ ಅಧಿಕಾವಿದೆಯೆಂದು ಸುಳ್ಳು ಹೇಳಿ, ಅಂತಾರಾಷ್ಟ್ರೀಯ ಸ್ಥರದಲ್ಲಿ ಷಡ್ಯಂತ್ರ್ಯವನ್ನು ಮತಾಂಧ ಸಂಘಟನೆಗಳು ರಚಿಸಿದ್ದವು. ಇಂದು ಕರ್ನಾಟಕ ಉಚ್ಚ ನ್ಯಾಯಾಲಯವು ‘ಹಿಜಾಬ್ ಇಸ್ಲಾಂನ ಅತ್ಯವಶ್ಯಕ ಆಚರಣೆಯಲ್ಲ, ಶಾಲೆಗಳಲ್ಲಿ, ಸರ್ಕಾರ ನಿಗದಿ ಪಡಿಸಿದ ಸಮವಸ್ತ್ರವನ್ನೇ ಧರಿಸಬೇಕು ಎಂದು ಐತಿಹಾಸಿಕ ನಿರ್ಣಯ ನೀಡುವ ಮೂಲಕ ಅದನ್ನು ವಿಫಲಗೊಳಿಸಿದೆ. ಈ ಐತಿಹಾಸಿಕ ನಿರ್ಣಯವನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ ಗೌಡ ತಿಳಿಸಿದ್ದಾರೆ.

    ಈ ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಅಲ್ಲದೇ ಹಿಂದೂ ಕಾರ್ಯಕರ್ತರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಹಾಗೂ ಗಲಭೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು.

    300x250 AD

    ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ಶಾಲಾ ವಿದ್ಯಾರ್ಥಿಗಳಲ್ಲಿ ಕೋಮುಭಾವನೆಯನ್ನು ಬಿತ್ತುವ ಮತಾಂಧ ಸಂಘಟನೆಗಳಿಗೆ ಶಾಲಾ ಕಾಲೇಜು ಆವರಣದೊಳಗೆ ಪ್ರವೇಶ ನೀಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.

    Share This
    300x250 AD
    300x250 AD
    300x250 AD
    Back to top