ಭಟ್ಕಳ: ಇಂದು ಹೈಕೋರ್ಟ್ ಹಿಜಾಬ್ ಕುರಿತು ಅಂತಿಮ ತೀರ್ಪು ನೀಡಿದ್ದು, ತೀರ್ಪಿನ ವಿರುದ್ಧ ಭಟ್ಕಳ ತಂಜಿಂ ಸಂಸ್ಥೆ ವಿರೋಧ ವ್ಯಕ್ತಪಡಿಸಿದೆ. ಭಟ್ಕಳದಲ್ಲಿ ನಾಳೆ ತೀರ್ಪು ವಿರೋಧಿಸಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ತಂಜೀಮ್ ಸಂಘಟನೆ ಕರೆ ನೀಡಿದ್ದು, ನಾಳೆ ತಂಜಿಂ ಸಂಸ್ಥೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದೆ.
ಈ ಕುರಿತು ತಂಜಿಂ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ತಂಜಿಂ ಬುಧವಾರ ಕಾರ್ಯನಿರ್ವಹಿಸುವುದಿಲ್ಲ. ನಮ್ಮ ಇತರ ಸದಸ್ಯರು ಕೂಡ ಅವರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಿದ್ದಾರೆ. ನಾವು ಯಾರನ್ನೂ ಒತ್ತಯಿಸುತ್ತಿಲ್ಲ . ಸ್ವ ಇಚ್ಚೆಯಿಂದ ಬಂದ್ ಮಾಡಲು ಬಯಸಿದವರು ಬಂದ್ ಮಾಡಬಹುದು ಎಂದು ಕರೆ ನೀಡಿದ್ದಾರೆ.