• first
  second
  third
  previous arrow
  next arrow
 • ವಿಜೃಂಭಣೆಯಿಂದ ನಡೆದ ಕಲ್ಲೇಶ್ವರ ಮಹಾಸ್ವಾಮಿಗಳ ಹದಿನೈದನೇ ಪುಣ್ಯಾರಾಧನೆ

  300x250 AD

  ಶಿರಸಿ:ಮತ್ಪರಮಹಂಸ ಪಾರಿವಾಜಕಾಚಾರ್ಯವರ್ಯ ಸಚ್ಚಿದಾನಂದ ಸ್ವರೂಪ ಸದ್ಗುರು ಅವಧೂತ ಕಲ್ಲೇಶ್ವರ ಮಹಾಸ್ವಾಮಿಗಳ ಹದಿನೈದನೇ ಪುಣ್ಯಾರಾಧನಾ ಮಹೋತ್ಸವ ಶ್ರೀ ಗುರುಮಠ ಕ್ಯಾದಗಿಕೊಪ್ಪ (ಅಂಡಗಿ )ಯಲ್ಲಿ ಶ್ರದ್ಧಾ ಭಕ್ತಿಯಿಂದ ಅತ್ಯಂತ ವಿಜೃಂಭಣೆಯಿಂದ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು.

  ಪುಣ್ಯಾರಾಧನೆಯ ಮೊದಲ ದಿನ ಶನಿವಾರ ಸಂಜೆ ಗಾಯತ್ರಿ ಹೋಮ ಹವನಗಳು ನಡೆದವು ರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನೆಗಳು ಹಾಗೂ ನಾಮ ಸ್ಮರಣೆ ನಡೆದವು. ಮರುದಿನ ರವಿವಾರ ಬೆಳಗ್ಗೆ 5-20 ರಿಂದ ಓಂಕಾರ ಸುಪ್ರಭಾತ. ಕಲ್ಲೇಶ್ವರ ದ್ವಜಾರೋಹಣ ಪೂಜ್ಯ ಕಲ್ಯಾಣ ಸ್ವಾಮಿಗಳಿಂದ ನಡೆಯಿತು ನಂತರ ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ, ವೇದ ಪಠಣ ಶ್ರೀ ಗುರು ಅಷ್ಟೊತ್ತರ ಹಾಗೂ ಮಹಾಮಂಗಳಾರತಿ.10 ಗಂಟೆ ಗೆ ವೇದಘೋಷ ಹಾಗೂ ಪೂರ್ಣ ಕುಂಭ ಮತ್ತು ಸದ್ಗುರುಗಳ ಪಾದುಕೆ ಸಹಿತ ಶ್ರೀ ಗುರುಮಠ ಪ್ರದಕ್ಷಿಣೆಯೊಂದಿಗೆ ಧರ್ಮಸಭಾ ವೇದಿಕೆಗೆ ಆಹ್ವಾನ. ವೇದಿಕೆಯಲ್ಲಿ ಸದ್ಗುರುವಿನ ಪೂಜೆಯೊಂದಿಗೆ ಧರ್ಮ ಸಭೆ ಪ್ರಾರಂಭವಾಯಿತು.

  ಹಿರೇಕುಂಬಿ ಬೆಳಗಾವಿ ಜಿಲ್ಲೆಯ ಶಂಭಯಮಠದ ಮಡಿವಾಳಯ್ಯ ರಾಚಯ್ಯ ಮಾತನಾಡುತ್ತಾ ಭಕ್ತಿಯಿಂದ ನಡೆದುಕೊಂಡರೆ ಎಲ್ಲಾ ಮಾರ್ಗಗಳು ಸಿಗುತ್ತವೆ. ಅವಧುತ ಶ್ರೀ ಗುರು ಮಠಕ್ಕೆ ಜಾತಿ ಧರ್ಮದ ಬೆದವಿಲ್ಲಾ ಎಲ್ಲರು ಭಕ್ತಿಯಿಂದ ನಡೆದುಕೊಂಡು ಹೋಗಿ ಎಂದರು.

  ಮೈಲಾರೇಶ್ವರ ಮಠ ಧಾರವಾಡದ ಮೈಲಾರೇಶ್ವರ ಸ್ವಾಮೀಜಿ ಮಾತನಾಡಿ ಗುರುಗಳು ಗುರು ಪರಂಪರೆ ಬೆಳೆಯಲಿ ಎಂದು ಇಲ್ಲಿ ಐಕ್ಯವಾಗಿದ್ದಾರೆ ನೀವೆಲ್ಲಾಎಷ್ಟೋ ಜನ್ಮದ ಪುಣ್ಯ ಮಾಡಿರುವಿರಿ ಹಾಗಾಗಿ ಶ್ರೀಗುರು ಇಲ್ಲಿ ಐಕ್ಯ ವಾಗಿದ್ದಾರೆ. ಚೈತನ್ಯ ಸ್ವರೂಪಿಯಾಗಿ ಇಲ್ಲಿ ಎಲ್ಲಲ್ಲೂ ಇದ್ದಾನೆ.ಮಾನವ ದೇವರಾಗಲು ಸಾಧ್ಯ ಅದು ಗುರುವಿನ ಸೇವಯನ್ನು ಭಕ್ತಿಯಿಂದ ಸೇವೆ ಮಾಡಿದಾಗ ಸಾಧ್ಯ.ಹಾಗಾಗಿ ಗುರುಮಠದಲ್ಲಿ ಸೇವೆ ಮಾಡುವ ಮನೋಭಾವ ಬೆಳಸಿಕೊಳ್ಳಿ. ಮನುಸ್ಯ ಜಯ ಹುಡುಕುತ್ತಾ ಹೋಗುತ್ತಾನೆ ಜಯ ಅಂದರೆ ಸಮಾಧಾನ ಅದು ಭಗವಂತನ ನಾಮಸ್ಮರಣೆಯಿಂದ ಸಿಗುತ್ತದೆ. ಹಾಗಾಗಿ ಸದಾ ನಾಮಸ್ಮರಣೆ ಮಾಡಿ ಎಂದರು.

  ಚುಳಕಿಗವಿ ಗಟ್ಟಿ ಕೇರಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ ಜ್ಞಾನ ಬೇಕಾದರೆ ಗುರುಕೃಪೆ ಬೇಕು ಏಕಾಗ್ರತೆಯಿಂದ ಗುರುವಿನ ಹತ್ತಿರ ಹೋದಾಗ ಗುರು ಕೃಪಾ ದೊರೆಯುತ್ತದೆ. ಮೊದಲು ಧೂತನಾಗಿ ಸೇವೆ ಮಾಡಿ ನಂತರ ಸಂತರಾಗುವಿರಿ ಎಂದರು.

  ಧರ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದ ಗಾಳೆಶ್ವರ ಮಠದ ಚಿದಾನಂದ ಮಹಾಸ್ವಾಮಿ ಆಶೀರ್ವಚನ ನೀಡುತ್ತಾ ಮನುಸ್ಯನಿಗೆ ಸಂಸ್ಕಾರ ಬಹಳ ಮುಖ್ಯ ಗುರುಸೇವೆ ಮಾಡಿದರೆ ಬ್ರಹ್ಮ ಜ್ಯಾನ ಸಿಗುತ್ತದೆ. ಅರವತ ನಾಲ್ಕು ವಿಧ್ಯೆಗಳಲ್ಲಿ ಬ್ರಹ್ಮ ವಿದ್ಯೇ ಶ್ರೇಷ್ಟವಾದುದ್ದು ಇದನ್ನು ಕೊಡುವರು ಸದ್ಗರು ಅವಧು ತರು ನೀಡುತ್ತಾರೆ. ಈ ಜ್ಯಾನ ಸುಖ ಸಿಕ್ಕರೆ ಬೇರೇನೂ ಬೇಡ ಜೀವನ ಸಾಕ್ಷಾತ್ಕಾರ ಆಗುತ್ತದೆ. 84 ಲಕ್ಷ್ಯ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಕೊನೆಯ ಜನ್ಮ ಈ ಜನ್ಮದಲ್ಲಿ ಗುರುಸೇವೆ ಮಾಡಿ ಸದ್ಗತಿ ಹೊಂದಿ ಪ್ರತಿ ಕ್ಷಣ ಗುರುನಾಮ ಸ್ಮರಣೆ ಮಾಡಿ ಪುಣ್ಯದಿಂದ ಸುಖ ನೆಮ್ಮದಿ ಸಿಗುತ್ತದೆ ಎಂದರು.

  300x250 AD

  ಗುರುವಿನ ಶಿಷ್ಯರಾದ ಸರಣಪ್ಪ ಕೋಡ್ಕಣಿ ಮಾತನಾಡುತ್ತಾ ಗುರುಗಳು ಮಾಡಿದ ಅನುಷ್ಠಾನ ಮೌನ ವ್ರತಗಳು ಅಲ್ಲಿ ನಡೆದ ಪವಾಡಗಳ ಬಗ್ಗೆ ಭಕ್ತರಿಗೆ ತಿಳಿಹೇಳುತ್ತ ಗುರುವಿನ ಮಹಿಮೆ ತಿಳಿಸಿದರು.

  ಧರ್ಮ ಸಭೆಯಲ್ಲಿ ಗುರುಮಠ ಕ್ಯಾದಾಗಿಕೊಪ್ಪ (ಅಂಡಗಿ ) ಕಲ್ಯಾಣ ಸ್ವಾಮೀಜಿ, ಸಿದ್ದಾರೂಢ ಮಠ ಹೇಬಸೂರು ಧಾರವಾಡದ ಸಿದ್ಧಯ್ಯ ಸ್ವಾಮೀಜಿ ಉಪಸ್ಥಿತರಿದ್ದರು.

  ಸಭೆಯಲ್ಲಿ ಚಿಂತನ ಶ್ರೀಗುರು ಮಠದ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು. ವಾರ್ಷಿಕ ವರದಿ ವಾಚನವನ್ನು ಗುರುಮಠದ ಕಾರ್ಯದರ್ಶಿ ಸೊಮ್ಮಣ್ಣ ಅಂಡಗಿ ಮಾಡಿದರು.

  ಕಾರ್ಯಕ್ರಮದಲ್ಲಿ ಶ್ರೀ ಗುರುಮಠದ ಅಧ್ಯಕ್ಷರಾದ ಭೀಮಣ್ಣ ಟಿ ನಾಯ್ಕ ಉಪಾಧ್ಯಕ್ಷರಾದ ಸಿ ಎಫ್ ನಾಯ್ಕ, ಮಲ್ಲಿಕಾರ್ಜುನಯ್ಯ ಗುಂಡಯ್ಯ, ಕಲಾಲ ಸಾಹೇಬ್ ಸವದತ್ತಿ ಉಪಸ್ಥಿತರಿದ್ದರು.

  ಧರ್ಮ ಸಭೆಯಲ್ಲಿ ಶ್ರೀ ಗುರುಮಠದಲ್ಲಿ ವೇಧಅಧ್ಯಯನ ಮಾಡಿದ ವಿದ್ಯಾರ್ಥಿಗಳಿಂದ್ ವೇದ ಮಂತ್ರ ಪಠಣ ಮಾಡಿದರು ಕಾರ್ಯಕ್ರಮದ ನಿರ್ವಹಣೆಯನ್ನು ಉಪನ್ಯಾಸಕರಾದ ಪ್ರಮೋದ ಉಮ್ಮುಡಿ ಮಾಡಿದರು. ಉಪಾಧ್ಯಕ್ಷ ಸಿ ಎಫ್ ನಾಯ್ಕ ಸ್ವಾಗತಿಸಿದರು. ವಕೀಲರಾದ ಮಹೇಶ ಕೆ ಎಂ ವಂದಿಸಿದರು.

  Share This
  300x250 AD
  300x250 AD
  300x250 AD
  Back to top