• first
  second
  third
  previous arrow
  next arrow
 • ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ಹೋಳಿ ಆಚರಿಸಿ; ಶ್ರೀಕೃಷ್ಣ ಕಾಮ್ಕರ್

  300x250 AD

  ಯಲ್ಲಾಪುರ: ಹಬ್ಬ,ಉತ್ಸವಗಳ ಆಚರಣೆಗೆ ಯಾವುದೇ ನಿರ್ಭಂಧ ಈ ಬಾರಿ ಇಲ್ಲ. ಆದರೆ ಆರೋಗ್ಯದ ವಿಷಯವಾಗಿ ನಿರ್ಲಕ್ಷ್ಯ,ನಿಷ್ಕಾಳಜಿ ಮಾಡಬಾರದು ಎಂದು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ ಹೇಳಿದರು.

  ಅವರು ಸೋಮವಾರ ಪಟ್ಟಣದ ಅಡಕೆ ಭವನದಲ್ಲಿ ಹೋಳಿ ಹಾಗೂ ಯುಗಾದಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾರಿಗೂ ಬಣ್ಣವನ್ನು ಬಲತ್ಕಾರವಾಗಿ ಹಚ್ಚಬೇಡಿ. ಬಸ್ ನಲ್ಲಿರುವ ಪ್ರಯಾಣಿಕರ ಮೇಲೆ ಬಣ್ಣ ಎರಚಬೇಡಿ ಎಂದರು.

  ಸಿಪಿಐ ಸುರೇಶ ಯಳ್ಳೂರು ಮಾತನಾಡಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದೇ ಇರುವ ರೀತಿಯಲ್ಲಿ ಹೋಳಿ ಹಾಗೂ ಯುಗಾದಿ ಉತ್ಸವವನ್ನು ಆಚರಿಸಬೇಕು. ಕಿಡಿಗೇಡಿಗಳು ಶಾಂತಿ ಕದಡುವ ಯತ್ನ ಮಾಡುವ ಕುರಿತು ಎಚ್ಚರದಿಂದ ಇರಬೇಕೆಂದರು.

  ಮಾ.17 ರಂದು ಕಾಮಣ್ಣನ ಪ್ರತಿಷ್ಠೆ, 18 ರಂದು ಸಂಜೆ 5.50 ರಿಂದ ರವೀಂದ್ರನಗರ, ಅಂಬೇಡ್ಕರ್ ನಗರ ಹಾಗೂ ಶಾರದಾಗಲ್ಲಿಗಳಿಂದ ಬೇಡರವೇಷ ಕುಣಿತ ಮೆರವಣಿಗೆ ನಡೆಯಲಿದೆ. 19 ರಂದು ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2 ರವರೆಗೆ ಬಣ್ಣ ಎರಚಾಟ, ನಂತರ ಕಾಮದಹನ ನಡೆಯಲಿದೆ ಎಂದು ಹೋಳಿ ಅಚರಣಾ ಸಮಿತಿಯವರು ಮಾಹಿತಿ ನೀಡಿದರು.

  300x250 AD

  ಮಾ.30 ರಂದು ಮಧ್ಯಾಹ್ನ 3ಕ್ಕೆ ಯುಗಾದಿ ಉತ್ಸವದ ಬೈಕ್ ರ್ಯಾಲಿ ನಡೆಯಲಿದೆ. ಏ.2 ರಂದು ಮಧ್ಯಾಹ್ನ 3 ರಿಂದ ಶೋಭಾಯಾತ್ರೆ ನಡೆಯಲಿದ್ದು. ಡಿಜೆ, ಚಂಡೆವಾದನ, ಜಾಂಜ್, ಸುಮಾರು 15 ಟ್ಯಾಬ್ಲೋಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿವೆ. ಏ.3 ರಂದು ಧರ್ಮಜಾಗೃತಿ ಸಭೆ ನಡೆಯಲಿದೆ ಎಂದು ಯುಗಾದಿ ಉತ್ಸವ ಸಮಿತಿಯವರು ಸಭೆಗೆ ತಿಳಿಸಿದರು.

  ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ್, ಮುಖ್ಯಾಧಿಕಾರಿ ಸಂಗನಬಸಯ್ಯ, ಪ್ರಮುಖರಾದ ಜಿ.ಎನ್.ಗಾಂವ್ಕಾರ, ರಾಮು ನಾಯ್ಕ, ಪ್ರದೀಪ ಯಲ್ಲಾಪುರಕರ್, ಮಾರುತಿ ಬೋವಿವಡ್ಡರ್, ಜಗನ್ನಾಥ ರೇವಣಕರ್, ಸತೀಶ ನಾಯ್ಕ, ನಮಿತಾ ಬೀಡಿಕರ್, ಗೌರಿ ನಂದೊಳ್ಳಿಮಠ, ರಾಧಾ ಗುಡಿಗಾರ ಇತರರಿದ್ದರು. ಪೊಲೀಸ್ ಇಲಾಖೆಯ ನಾಗಪ್ಪ ಲಮಾಣಿ ನಿರ್ವಹಿಸಿದರು.

  Share This
  300x250 AD
  300x250 AD
  300x250 AD
  Back to top