• first
    second
    third
    previous arrow
    next arrow
  • ವನಗಳ ನಿರ್ಮಾಣದಿಂದ ದೇಶದ ಸುಸ್ಥಿರ ಅಭಿವೃದ್ಧಿ ಸಾಧ್ಯ; ಸತೀಶ ನಾಯ್ಕ

    300x250 AD

    ಶಿರಸಿ: ಅರಣ್ಯ ದಟ್ಟ ಕಾಡು ಪಶ್ಚಿಮ ಘಟ್ಟ ಜಗತ್ತಿನ ಎಲ್ಲ ಜನರಿಗೂ ಪಶ್ಚಿಮ ಘಟ್ಟ ಹೃದಯವಿದ್ದಂತೆ ಆದರೆ ಇಂದು ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳ ನಾಶ ಅವ್ಯಾಹತವಾಗಿ ನಡೆದು ಅರಣ್ಯ ಬರಿದಾಗುತ್ತಿದೆ..ಮುಂದಿನ ಪೀಳಿಗೆಗೆ ಒಳ್ಳೆಯ ಬಳುವಳಿ ನೀಡಬೇಕೆಂದರೆ ಅರಣ್ಯ ಸಂರಕ್ಷಣೆಯ ಕಾರ್ಯ ಆಗಲೇಬೇಕಿದೆ. ಪ್ರತಿ ಗ್ರಾಮದಲ್ಲೂ ವಿವಿಧ ರೀತಿಯ ವನ ನಿರ್ಮಾಣ ಕಾರ್ಯ ನಡೆಯಬೇಕಿದೆ. ವನ ನಿರ್ಮಾಣದಿಂದ ದೇಶದ ಸುಭದ್ರ, ಸುಸ್ಥಿರ ಅಭಿವೃದ್ದಿ ಸಾಧ್ಯ ಎಂದು ಸರ್ಕಾರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಸತೀಶ ನಾಯ್ಕ ಹೇಳಿದರು.

    ಅವರು ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಮತ್ತು ಯೂತ್ ಫಾರ್ ಸೇವಾ ಶಿರಸಿ ಇವುಗಳ ಸಂಯುಕ್ತಾಶ್ರಯದಲ್ಲಿ ಎಸಳೆ ಗ್ರಾಮದಲ್ಲಿರುವ ಶ್ರೀ ಮಾರಿಕಾಂಬಾ ವನದಲ್ಲಿ “ವಿಶ್ವ ಅರಣ್ಯ ದಿನ”ದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅರಣ್ಯವು ಸಹಜವಾಗಿ ಬೆಳೆದಾಗ ಅಂತರ್ಜಲ ಹೆಚ್ಚಳವಾಗುದಲ್ಲದೇ ಕೆರೆತೊರೆಗಳಿಗೆ ಜೀವತುಂಬುವದು. ಹಸಿರು ಪರಿಸರ ಹೆಚ್ಚಿದಷ್ಟು ಗ್ರಾಮೀಣ ಜನರಿಗೆ ಆಹಾರ ಭದ್ರತೆ ಒದಗಿಸುತ್ತದೆ.ವನಗಳ ಸಂವರ್ಧನೆಯಿಂದ ಸಕಲ ಜೀವ ವೈವಿಧ್ಯಗಳ ಸಂರಕ್ಷಣೆಯು ಸಾಧ್ಯ ಎಂದರು.

    “ವಿಶ್ವ ಅರಣ್ಯ ದಿನ”ದ ನಿಮಿತ್ತ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ 40 ಜನ ಸ್ವಯಂಸೇವಕರು ಮಾರಿಕಾಂಬಾ ವನದಲ್ಲಿರುವ ಮುಳ್ಳುಕಂಟಿ ತೆಗೆದರಲ್ಲದೇ ಪ್ಲಾಸ್ಟಿಕ್ ಕಸಗಳನ್ನು ಪ್ರತ್ಯೇಕಿಸಿ ಸ್ವಚ್ಚಗೊಳಿಸಿದರು.. . ವನದಲ್ಲಿರುವ 1200 ಗಿಡಗಳಿಗೆ ನೀರುಣಿಸುವ ಕಾರ್ಯ ಮಾಡಿದರು.

    300x250 AD

    ಯೂತ್ ಫಾರ್ ಸೇವಾ ಪರಿಸರ ಸಂಯೋಜಕ ಉಮಾಪತಿ ಭಟ್ಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೂತ್ ಫಾರ್ ಸೇವಾ ಸಂಚಾಲನಾ ಸಮಿತಿಯ ಸದಸ್ಯ ಚಂದ್ರು ಎಸಳೆ , ಯೂತ್ ಫಾರ್ ಸೇವಾ ದ ದೀಪಕ ಆರೇರ, ನಂದನ ನಾಯ್ಕ ಉಪಸ್ಥಿತರಿದ್ದರು.

    ಹೇಮಂತ ನಾಯ್ಕ ಮತ್ತು ಸೀತಾ ಹೆಗಡೆ ನೇತೃತ್ವವಹಿಸಿದ್ದರು. ಎನ್.ಎಸ್.ಎಸ್ ನಾಯಕ ಚೇತನ ಕುಮಾರ ನಾಯ್ಕ ಸ್ವಾಗತಿಸಿದರು, ಎನ್.ಎಸ್.ಎಸ್ ನಾಯಕಿ ನಿಖಿಲಾ ಹೆಗಡೆ ವಂದಿಸಿದರು.

    Share This
    300x250 AD
    300x250 AD
    300x250 AD
    Back to top