• first
  second
  third
  previous arrow
  next arrow
 • ಕೋಟೆಕೆರೆ ಕೆಳಭಾಗದ ಅಮ್ಯೂಸ್‍ಮೆಂಟ್ ಪಾರ್ಕಗೆ ಪರವಾನಿಗೆ ನೀಡದಂತೆ ಮನವಿ

  300x250 AD

  ಶಿರಸಿ: ಮಾರಿಕಾಂಬಾ ಜಾತ್ರೆಯ ಸಮಯದಲ್ಲಿ ಕೋಟೆಕೆರೆಯ ಕೆಳಭಾಗದಲ್ಲಿ ಅಮ್ಯೂಸ್‍ಮೆಂಟ್ ಪಾರ್ಕಗೆ ಪರವಾನಿಗೆ ನೀಡದಂತೆ ಶಿರಸಿ ನಗರದ ಸಾರ್ವಜನಿಕರ ಪರವಾಗಿ ಪ್ರಶಾಂತ್ ರುದ್ರಪ್ಪ ಪೂಜಾರಿ ಶಿರಸಿಯ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದಾರೆ.

  ಜಾತ್ರೆಯ ಸಂದರ್ಭದಲ್ಲಿ ಅವೈಜ್ಞಾನಿಕ ಅಮ್ಯೂಸ್‍ಮೆಂಟ ಪಾರ್ಕ ಹಾಗೂ ವಿವಿಧ ಆಟಗಳಿಗೆ ಅನುಮತಿ ನೀಡದಂತೆ ಒತ್ತಾಯಿಸಿದ್ದಾರೆ.

  ಒಂದು ವೇಳೆ ಅನುಮತಿ ನೀಡಿದಲ್ಲಿ ಆಗಬಹುದಾದ ಅನಾನುಕೂಲತೆ ಹಾಗೂ ಅನಾಹುತಗಳ ವಿವರಗಳು

  300x250 AD

  1.ಸದ್ರಿ ಅಮ್ಯೂಸ್‍ಮೆಂಟ್ ನಡೆಸಲು ಜಿಲ್ಲಾಧಿಕಾರಿಯಿಂದ ಪರವಾನಿಗೆ ಪಡೆದಿದ್ದು ಇರುವುದಿಲ್ಲ.
  2.ಲೋಕೋಪಯೋಗಿ ಇಲಾಖೆಯಿಂದ ಪರವಾನಿಗೆ ಪಡೆದಿರುವುದಿಲ್ಲ.
  3.ಸದ್ರಿ ಕೊಟೆಕೆರೆ ಜಾಗ ಜವಳಿನಿಂದ ಕೂಡಿದ್ದು ಮಣ್ಣ ಸಡಿಲಗೊಂಡು ಅನಾಹುತವಾಗುವ ಸಾಧ್ಯತೆ ಇರುತ್ತದೆ.
  4.ಸದ್ರಿ ಜಾಗದಲ್ಲಿ ಕೇವಲ ಮೂರು ಅಡಿ ತೆಗೆದಲ್ಲಿ ನೀರು ಬರುತ್ತದೆ.
  5.ಸದ್ರಿ ಅಮ್ಯೂಸ್‍ಮೆಂಟ್ 150 ಅಡಿ ಎತ್ತರ ಇರುವುರಿಂದ ಭೂಮಿಯು ಗಟ್ಟಿ ಮಣ್ಣಿನಿಂದ ಕೂಡಿರಬೇಕಾಗುತ್ತದೆ. ಅಥವಾ ಸಿಮೆಂಟ ಹಾಗೂ ಕಾಂಕ್ರೀಟಗಳಿಂದ ಭೂಮಿಯನ್ನು ಗಟ್ಟಿಗೊಳಿಸಿರಬೇಕಾಗುತ್ತದೆ. ಆದರೆ ಈ ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳದಿರುವುದರಿಂದ ಪ್ರಾಣ ಹಾನಿಯಾಗುವ ಸಾಧ್ಯತೆ ಇರುತ್ತದೆ.
  6.ಸದ್ರಿ ಜಾಗವು ಬೇರೆ ಬೇರೆ ಮಾಲಿಕರ ಸ್ವತ್ತಾಗಿದ್ದು ಸದ್ರಿ ಮಾಲೀಕರಿಂದ ಯಾವುದೇ ಪರವಾನಿಗೆ / ಅನುಮತಿ ಪಡೆದಿರುವುದಿಲ್ಲ.
  ಮಾಲೀಕರು ಇದಕ್ಕೆ ಯಾವುದೇ ಒಪ್ಪಿಗೆ ನೀಡಿರುವುದಿಲ್ಲ.
  7.ಸದ್ರಿ ಭೂಮಿಯ ಮಾಲೀಕರು ಪರ ಊರಿನಲ್ಲಿರುವದರ ದುರುಪಯೋಗ ಪಡೆದು ಸದ್ರಿ ಅಮ್ಯೂಸ್‍ಮೆಂಟ್ ನಡೆಸಲಾಗುತ್ತಿದೆ.
  ಸದ್ರಿ ಜಾಗದ ಮಾಲೀಕರಾದ ರಿಯಾಜ್ ಅಹ್ಮದ ಹಾಗೂ ಇತರರು, ವೆಂಕಟೇಶ ಶಾನಭಾಗ ಹಾಗೂ ಇತರರು ಸದ್ರಿ ಅಮ್ಯೂಸ್‍ಮೆಂಟ್ ಪಾರ್ಕ ಜಾಗದ ಯಾವುದೇ ಮಾಲಿಕರು ಜವಾಬ್ದಾರರಾಗಿರುವುದಿಲ್ಲ.

  ಕಾರಣ ಅವೈಜ್ಞಾನಿಕ ಅಮ್ಯೂಸ್‍ಮೆಂಟ್ ಪಾರ್ಕಗೆ ಅನುಮತಿ ನೀಡಬಾರದು. ಒಂದೊಮ್ಮೆ ಅಮ್ಯೂಸ್‍ಮೆಂಟ್ ಪಾರ್ಕಗೆ ಕಾನೂನು ಮತ್ತು ನಿಯಮಾವಳಿಗಳನ್ನು ಗಾಳಿಗೆ ತೂರಿ ನಡೆಸಿದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೋಳ್ಳಬೇಕು ಮತ್ತು ಕೂಡಲೇ ಅಮ್ಯೂಸ್‍ಮೆಂಟ್ ಪಾರ್ಕ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top