ಸಿದ್ದಾಪುರ:ಬಿದ್ರಕಾನ ತಾಲೂಕಿನ ಗ್ರೂಪ್ ಗ್ರಾಮಗಳ ಸೇವಾ ಸೇವಾ ಸಹಕಾರಿ ಸಂಘದಲ್ಲಿ ತಾಲೂಕು ನಿವೃತ್ತ ನೌಕರರ ಸಂಘ, ಗ್ರೀನ್ ವ್ಯಾಲಿ ಆಗ್ರ್ಯಾನಿಕ್ ಸ್ಪೈಸಸ್ ಹಾಗೂ ಲಯನ್ಸ್ ಕ್ಲಬ್ ಸಿದ್ದಾಪುರ ಇವುಗಳ ಆಶ್ರಯದಲ್ಲಿ ಸಿದ್ದಾಪುರದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಲಯದಲ್ಲಿ ಆರಂಭಗೊಂಡಿರುವ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಾಹಿತಿ ಕೇಂದ್ರದ ಉದ್ಘಾಟನಾ ಸಮಾರಂಭದ ಅಂಗವಾಗಿ ಎಲುಬು ಮತ್ತು ಕೀಲು, ಕಿವಿ-ಮೂಗು-ಗಂಟಲು, ಶ್ವಾಸಕೋಶ ಹಾಗೂ ಸಾಮಾನ್ಯ ವೈದ್ಯಕೀಯ ವಿಭಾಗಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಎಲುಬು ಮತ್ತು ಕೀಲು ತಜ್ಞ ಡಾ.ವಿಕ್ರಮ್ ಶೆಟ್ಟಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಜನರು ಕಷ್ದಲ್ಲಿದ್ದಾರೆ. ಕರೊನಾ ರೋಗದಿಂದಾಗಿ ಜನತೆ ಸಂಕಷ್ಟದಲ್ಲಿರುವುದು ನಮಗೆ ತಿಳಿದಿದೆ. ಎಲ್ಲ ಸೌಲಭ್ಯವನ್ನು ಹೊಂದಿದ ಹಾಗೂ ಎಲ್ಲ ರೋಗಗಳಿಗೆ ಚಿಕಿತ್ಸೆ ನೀಡುವ ಹೆಗ್ಗಳಿಕೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿದೆ ಎಂದು ಹೇಳಿದರು.
ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಪ್ರಬಂಧಕ ಹೇಮಂತ ಶೆಟ್ಟಿ ಆಸ್ಪತ್ರೆಯಲ್ಲಿನ ಸೌಲಭ್ಯ ಹಾಗೂ ಹೆಲ್ತ ಕಾರ್ಡ ಕುರಿತು ಮಾಹಿತಿ ನೀಡಿದರು.
ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಗ್ರೀನ್ ವ್ಯಾಲಿ ಆಗ್ರ್ಯಾನಿಕ್ ಸ್ಪೈಸಸ್‍ನ ರಾಘವೇಂದ್ರ ಶಾಸ್ತ್ರಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ ಭಟ್ಟ ಕಲ್ಲಾಳ, ಸೇವಾ ಸಂಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ಪ್ರಸನ್ನ ಹೆಗಡೆ ಶಿಬ್ಳಿ ಇದ್ದರು.
ಸಂಘದ ಅಧ್ಯಕ್ಷ ಪಿ.ಎಸ್.ಹೆಗಡೆ, ಉಪಾಧ್ಯಕ್ಷ ಪ್ರಕಾಶ ಹೆಗಡೆ, ಲಕ್ಷ್ಮೀಶ ಹೆಗಡೆ ಗೊಳಿಕೈ ಕಾರ್ಯಕ್ರಮ ನಿರ್ವಹಿಸಿದರು.
ಎಲುಬು ಮತ್ತು ಕೀಲು ತಜ್ಞ ಡಾ.ವಿಕ್ರಮ್ ಶೆಟ್ಟಿ, ಕಿವಿ-ಮೂಗು-ಗಂಟಲು ತಜ್ಞ ಡಾ.ವಾದಿಶ್ ಭಟ್ಟ,ಶ್ವಾಸ ಕೋಶ ತಜ್ಞ ಡಾ.ಚಂದ್ರಮೌಳಿ ಎಂ.ಟಿ, ವೈದ್ಯಕೀಯ ತಜ್ಞ ಡಾ.ವಿಪಿನ್ ಪೌಲ್ ಮತ್ತಿತರ ವೈದ್ಯಾಧಿಕಾರಿಗಳು ಉಚಿತ ಆರೋಗ್ಯ ಶಿಬಿರ ನಡೆಸಿಕೊಟ್ಟರು. 205ಜನರು ಶಿಬಿರದಲ್ಲಿ ಚಿಕಿತ್ಸೆ ಪಡೆದುಕೊಂಡರು.