ಸಿದ್ದಾಪುರ:ತಾಲೂಕಿನ ಒಡಗೇರೆ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಧಾರವಾಡ ಹಾಲು ಒಕ್ಕೂಟದಿಂದ ಐಬಿಪಿ ಯೋಜನೆಯ ಅನುದಾನದಲ್ಲಿ ಬಿಡುಗಡೆಯಾದ ತೂಕದ ಯಂತ್ರ ಹಾಗೂ ಪ್ಯಾಟ್(ಹಾಲಿನ ಜಿಡ್ಡ) ಪರೀಕ್ಷಿಸುವ ಯಂತ್ರವನ್ನು ಸಂಘದ ಅಧ್ಯಕ್ಷೆ ಪೂರ್ಣಿಮಾ ದಿನೇಶ ಮಡಿವಾಳ ಹಾಗೂ ಕಾರ್ಯದರ್ಶಿ ಸುಮಂಗಲಾ ಬಿ.ಮಡಿವಾಳ ಅವರಿಗೆ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಅವರು ನಿಡಗೋಡ ಬಿಎಂಸಿ ಕೇಂದ್ರದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಬಿಎಂಸಿ ಕೇಂದ್ರದ ಅಧ್ಯಕ್ಷ ಕೆ.ಪಿ.ಗೌಡರ್ ಹೂಕಾರ್, ವಿಸ್ತರಣಾಧಿಕಾರಿ ಪ್ರಕಾಶ ಕೆ. ಇದ್ದರು.