• Slide
    Slide
    Slide
    previous arrow
    next arrow
  • ‘ದ ಕಶ್ಮೀರಿ ಫೈಲ್’ ಚಿತ್ರ ಪ್ರದರ್ಶನ ಮಾಡುವಂತೆ ಆಗ್ರಹ: ಚಿತ್ರ ಮಂದಿರಕ್ಕೆ ಮುತ್ತಿಗೆ

    300x250 AD

    ಭಟ್ಕಳ: ತಾಲೂಕಿನ ಮಣ್ಕುಳಿಯ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ “ದ ಕಶ್ಮೀರಿ ಫೈಲ್” ಚಿತ್ರ ಪ್ರದರ್ಶನ ಮಾಡುವಂತೆ ಆಗ್ರಹಿಸಿ ಚಿತ್ರಮಂದಿರಕ್ಕೆ ಭಟ್ಕಳದ ಹಿಂದು ಕಾರ್ಯಕರ್ತರು ಮುತ್ತಿಗೆ ಹಾಕಿದರು.

    ಹಿಂದೂ ಪಂಡಿತರ ನೈಜ ಚಿತ್ರಕತೆಯನ್ನು ಆಧಾರಿತ ಕಶ್ಮೀರಿ ಫೈಲ್ ಭುವಿಯನ್ನು ಪ್ರದರ್ಶಿಸುವಂತೆ ಮಧ್ಯಾಹ್ನ 2.30 ಕ್ಕೆ ಪ್ರದರ್ಶನಗೊಳ್ಳುತ್ತಿದ್ದ ‘ರಾಧೆ ಶ್ಯಾಮ್” ಸ್ಥಗಿತಗೊಳಿಸಿ ಹಿಂದೂ ಕಾರ್ಯಕರ್ತರು ಹಾಗೂ ಚಿತ್ರಮಂದಿರದ ಮೇಲ್ವಿಚಾರಕರ ನಡುವೆ ಮಾತುಕತೆ ನಡೆದು ಕೊನೆಯಲ್ಲಿ ರಾತ್ರಿ 8.45 ರ ಚಿತ್ರ ಪ್ರದರ್ಶನಕ್ಕೆ “ದ ಕಶ್ಮೀರಿ ಫೈಲ್” ಚಿತ್ರವನ್ನು ಪ್ರದರ್ಶಿಸುವುದಾಗಿ ಭರವಸೆ ನೀಡಿದರು.

    ನಂತರ ಮಾತನಾಡಿದ ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಇತಿಹಾಸದಲ್ಲಿ ಮುಚ್ಚಿಟ್ಟಂತ ಕಶ್ಮೀರಿ ಪಂಡಿತರ ನೈಜ ಚಿತ್ರ ಕತೆ ಆಧಾರಿತ ಚಿತ್ರವನ್ನು ದೇಶ ಭಕ್ತರಿಗೆ ಅನಾವರಣ ಮಾಡಿದ್ದಾರೆ. ಆದರೆ ಕೆಲವೊಂದು ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ನಡೆಸದೆ ಚಿತ್ರ ಮಂದಿರ ಹೌಸ್ ಫುಲ್ ಎಂಬ ಬೋರ್ಡ ಹಾಕುವು ಮೂಲಕ ಷಡ್ಯಂತರ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ಭಟ್ಕಳದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ “ದ ಕಶ್ಮೀರಿ ಫೈಲ್” ಚಿತ್ರ ಪ್ರದರ್ಶನಗೊಳ್ಳದಿದ್ದರೆ ಮುಂದೆ ಆಗುವ ಹೊಣೆಗೆ ಅವರೇ ಹೊಣೆಗಾರರಾಗಿರುತ್ತಾರೆ ಎಂದರು.

    300x250 AD

    ಈ ವೇಳೆ ಹಿಂದೂ ಕಾರ್ಯಕರ್ತರಾದ ಶ್ರೀಕಾಂತ ನಾಯ್ಕ ಶ್ರೀನಿವಾಸ ಹನುಮಾನಗರ, ರಾಜೇಶ, ಪಾಂಡುರಂಗ ನಾಯ್ಕ, ಕೃಷ್ಣ ಕಂಚುಗಾರ, ನಾಗೇಶ ನಾಯ್ಕ ಚೌಥನಿ, ದಿನೇಶ ಮೊಗೇರ ಜಾಲಿ, ಮೋಹನ ನಾಯ್ಕ ಅರುಣ ನಾಯ್ಕ ವಿವೇಕ ನಾಯ್ಕ ಜಾಲಿ, ಬಾಬು ಕಾರಗದ್ದೆ, ವಸಂತ ಜಂಬೂರ್ ಮಠ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top