• Slide
  Slide
  Slide
  previous arrow
  next arrow
 • ಮಾ.14ಕ್ಕೆ ಮಾಗೋಡಿನಲ್ಲಿ ಹಿರಿಯರ ಸಂಸ್ಮರಣೆ-ತಾಳಮದ್ದಲೆ

  300x250 AD

  ಯಲ್ಲಾಪುರ: ಕರ್ನಾಟಕ ಯಕ್ಷಗಾನ ಅಕಾಡೆಮಿ, ಇಬ್ಬನಿ ಫೌಂಡೇಷನ್ ಮಾಗೋಡ ಇವರ ಆಶ್ರಯದಲ್ಲಿ ಮಾಗೋಡ ಹಾದಿಮನೆಯ ಈಶಾವಾಸ್ಯಂ ಸಭಾಭವನದಲ್ಲಿ ಹಿರಿಯರ ಸಂಸ್ಮರಣೆ ಹಾಗೂ ತಾಳಮದ್ದಲೆ ಮಾ.14 ರಂದು ಮಧ್ಯಾಹ್ನ 2.30 ಕ್ಕೆ ನಡೆಯಲಿದೆ.

  ಅರ್ಥಧಾರಿ ದಿ.ಸುಬ್ರಾಯ ಜೋಷಿ ಮಾಗೋಡ ಅವರ ಸಂಸ್ಮರಣೆ ನಡೆಯಲಿದ್ದು, ಕಾರ್ಯಕ್ರಮವನ್ನು ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಗೋಳಿಕೊಪ್ಪ ಉದ್ಘಾಟಿಸಲಿದ್ದಾರೆ. ಗ್ರಾ.ಪಂ ಅಧ್ಯಕ್ಷ ನರಸಿಂಹ ಕೋಣೆಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಗ್ರಾ.ಪಂ ಸದಸ್ಯರಾದ ರಾಮಕೃಷ್ಣ ಹೆಗಡೆ ದಂತಳಿಗೆ, ಭವಾನಿ ಸಿದ್ದಿ, ಅನಂತ ಸಾಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಗುಮ್ಮಾನಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಭಾಗವಹಿಸಲಿದ್ದಾರೆ.

  300x250 AD

  ನಂತರ ಜಾಂಬವತಿ ಕಲ್ಯಾಣ ತಾಳಮದ್ದಲೆ ನಡೆಯಲಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಶಶಾಂಕ ಬೋಡೆ, ಮದ್ದಲೆವಾದಕರಾಗಿ ರಾಘವೇಂದ್ರ ಭಟ್ಟ ಹಂಡ್ರಮನೆ ಭಾಗವಹಿಸುವರು. ನರಸಿಂಹ ಭಟ್ಟ ಕುಂಕಿಮನೆ, ವೇ.ಶಿವರಾಮ ಭಟ್ಟ ಮೊಟ್ಟೆಗದ್ದೆ, ಶ್ರೀಧರ ಅಣಲಗಾರ, ವೇ.ಮಂಜುನಾಥ ಜೋಶಿ ಅರ್ಥಧಾರಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಇಬ್ಬನಿ ಫೌಂಡೇಷನ್ ಅಧ್ಯಕ್ಷ ವಿ.ಎನ್.ಹೆಗಡೆ ಹಾದಿಮನೆ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top