• Slide
  Slide
  Slide
  previous arrow
  next arrow
 • ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

  300x250 AD

  ಹೊನ್ನಾವರ: ಕೃಷಿ ಇಲಾಖೆಯ ಆತ್ಮ ಯೋಜನೆಯ ತಾಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
  ಕೃಷಿ, ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ ಅಭಿವೃದ್ಧಿ, ತೋಟಗಾರಿಕೆ, ಹೈನುಗಾರಿಕೆ, ಆಧುನಿಕ ಯಂತ್ರೋಪಕರಣಗಳ ಬಳಕೆ, ಹೈಟೆಕ್ ತಂತ್ರಜ್ಞಾನ ಬಳಕೆ, ರೇಷ್ಮೆ ಬೇಸಾಯ, ಅರಣ್ಯ ಕೃಷಿ ಇತ್ಯಾದಿ ಚಟುವಟಿಕೆಗಳಲ್ಲಿ ವಿಶೇಷ ಸಾಧನೆಗೈದ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
  ರೈತರು ಆಧಾರ್ ಕಾರ್ಡ್ ಬ್ಯಾಂಕ್ ಪಾಸ್‍ಬುಕ್, ಪಹಣಿ ಪತ್ರದ ನಕಲು ಪ್ರತಿಗಳು, ಛಾಯಾಚಿತ್ರ ಹಾಗೂ ಸಾಧನೆಗೈದ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಆಸಕ್ತರು ಹೊನ್ನಾವರ ಕೃಷಿ ಇಲಾಖೆ ಕಚೇರಿಯಿಂದ ಅರ್ಜಿ ಪಡೆದು ಆ.15 ರೊಳಗೆ ಅರ್ಜಿಯನ್ನು ಸಹಾಯಕ ಕೃಷಿ ನಿರ್ದೇಶಕರು ಹೊನ್ನಾವರ, ರೈತ ಸಂಪರ್ಕ ಕೇಂದ್ರ, ಮಂಕಿ ಹಾಗೂ ಹಡಿನಬಾಳ ಕಚೇರಿಗೆ ಸಲ್ಲಿಸಬೇಕು.
  ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು, ಮೊ: 8277933036, ತಾಲೂಕಾ ತಾಂತ್ರಿಕ ವ್ಯವಸ್ಥಾಪಕರು. ಮೊ: 7795284599, ರೈತ ಸಂಪರ್ಕ ಕೇಂದ್ರ, ಹಡಿನಬಾಳ ಮೊ: 9353619650, ರೈತ ಸಂಪರ್ಕ ಕೇಂದ್ರ, ಮಂಕಿ ಮೊ: 9731670378ಕ್ಕೆ ಸಂಪರ್ಕಿಸುವಂತೆ ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top