• Slide
  Slide
  Slide
  previous arrow
  next arrow
 • ಅರಣ್ಯವಾಸಿಗಳನ್ನು ಉಳಿಸಿ- ಜಾಥ; ಹೊನ್ನಾವರ ಗ್ರಾಮೀಣ ಪ್ರದೇಶಗಳ ಸಂಚಾರ

  300x250 AD

  ಹೊನ್ನಾವರ: ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ್ದೇವೆ ಜಿಪಿಎಸ್ ಆಗಿಲ್ಲ. ನಮ್ಮದು ಜಿಪಿಎಸ್ ಮಾಡಿದ್ದಾರೆ ಪೂರ್ತಿ ಮಾಡಿಲ್ಲ. ಜಿಪಿಎಸ್ ಆಗಿದ್ದಲ್ಲಿ ಕೃಷಿ ಕೆಲಸ ಸಾಧ್ಯವಿಲ್ಲ. ಮಳೇಗಾಲದಲ್ಲಿ ಮನೆ ಬಿದ್ದುಹೋಗಿದೆ. ಪುನಃ ಮನೆ ಕಟ್ಟಲು ತೊಂದರೆ ಕೋಡುತ್ತಿದ್ದಾರೆ. ಅರಣ್ಯ ಸಿಬ್ಬಂದಿಗಳು ಕಿರುಕುಳ ಕೋಡ್ತಾರೆ. ಇದ್ದವರಿಗೆ ಒಂದು, ಇಲ್ಲದಿದ್ದವರಿಗೆ ಒಂದು ನೀತಿ ಅರಣ್ಯ ಇಲಾಖೆಯದ್ದು ಹೀಗೆ ಮುಂತಾದ ಮಾತುಗಳು ಅರಣ್ಯವಾಸಿಗಳಿಂದ ಕೇಳಿಬಂದವು.

  ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಇಂದು ಹೋನ್ನಾವರ ತಾಲೂಕಿನ, ಗೇರಸೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಹೆಬ್ರೆಯಲ್ಲಿ ಜರುಗಿದ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಅಂಗವಾಗಿ ಏರ್ಪಡಿಸಿದ “ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್ತ” ನಲ್ಲಿ ಅರಣ್ಯವಾಸಿಗಳಿಂದ ಕೇಳಿಬಂದ ಪ್ರಶ್ನೆಗಳಾದವು.

  ಪದೇ ಪದೇ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿಂದ ತೊಂದರೆ, ಕಿರುಕುಳ ಆಗುವ ಬಗ್ಗೆ ಹೇಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದ ಅರಣ್ಯವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು. ಅರಣ್ಯ ಹಕ್ಕು ಕಾಯಿದೆಯಲ್ಲಿ ಅರಣ್ಯವಾಸಿಗಳ ಮಂಜೂರಿಗೆ ಸಂಬಂಧಪಟ್ಟಂತೆ ಕಾನೂನಾತ್ಮಕ ತೊಡಕುಗಳಿಂದ ಅರಣ್ಯವಾಸಿಗಳಿಗೆ ಸಮಸ್ಯೆಗಳು ಉಂಟಾಗುವ ಕುರಿತು ಸಭೆಯಲ್ಲಿ ಪ್ರಸ್ತಾಪವಾದವು.

  ಅರಣ್ಯವಾಸಿಗಳಿಗೆ ನ್ಯಾಯ ಕೊಡಿಸಬೇಕು. ಅರಣ್ಯವಾಸಿಗಳ ಮಂಜೂರಿಗೆ ಸಂಬಂಧಪಟ್ಟಂತೆ ಕಾನೂನಾತ್ಮಕ ಅಂಶಗಳನ್ನ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಮುಂದಿನ ದಿನಗಳಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಲು ತೀರ್ಮಾನಿಸಲಾಯಿತು.

  300x250 AD

  ಸಭೆಯಲ್ಲಿ ರಾಜು ನಾಯ್ಕ ಗೇರಸೊಪ್ಪ ಸ್ವಾಗತಿಸಿದರು, ಜಿಲ್ಲಾ ಸಂಚಾಲಕ ರಾಮು ಮರಾಠಿ ಪ್ರಾಸ್ತವಿಕ ಮಾಡಿದರು, ಸಭೆಯಲ್ಲಿ ಹನುಮಂತ ನಾಯ್ಕ, ಮಂಜುನಾಥ ನಾಯ್ಕ, ಲಕ್ಷ್ಮಣ ಎಲ್ ನಾಯ್ಕ, ವಿನಾಯಕ, ರಾಜು ಡಿ ನಾಯ್ಕ, ಗಫರ್ ಮಹಮ್ಮದ್ ಸಾಬ ಮುಂತಾದವರು ಸಭೆಯಲ್ಲಿ ಮಾತನಾಡಿದರು.

  ಸಭೆಯಲ್ಲಿ ವಿನೋಧ ನಾಯ್ಕ, ಗಣೇಶ ನಾಯ್ಕ, ಮಂಜು ಮರಾಠಿ, ಶಿವು ಜಲವಳ್ಳಿ, ಅಣ್ಣಪ್ಪ ನಾಯ್ಕ ಬೈಲಗದ್ದೆ ಮುಂತಾದವರು ಉಪಸ್ಥಿತರಿದ್ದರು.

  ದೌರ್ಜನ್ಯ ಸ್ಥಳಕ್ಕೆ ಭೇಟಿ: ಬೈಲಗದ್ದೆಯ ಅರಣ್ಯ ಅತೀಕ್ರಮಣದಾರ ಸುಬ್ರಾಯ ನಾಯ್ಕರ ಕಟ್ಟಡ ದ್ವಂಸಗೊಳಿಸಿದ ಸ್ಥಳಕ್ಕೆ ಹೋರಾಟಗಾರರ ನಿಯೋಗವು ಭೇಟ್ಟಿಕೊಟ್ಟು ಸ್ಥಳ ಪರಿಶೀಲನೆ ಮಾಡಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top