ಶಿರಸಿ: ತಾಲೂಕಿನ ಮುರೇಗಾರ ಫಾಲ್ಸ್ ನಲ್ಲಿ ಮುಳುಗಿ ತುಮಕೂರಿ ಮೂಲದ ಪ್ರವಾಸಿಗನೊಬ್ಬ ಸಾವಿಗೀಡಾಗಿದ್ದಾನೆ.
ತುಮಕೂರು ಮೂಲದ ವ್ಯಕ್ತಿ ನವೀನ ಕುಮಾರ್ (35) ಮೃತಪಟ್ಟ ದುರ್ದೈವಿಯಾಗಿದ್ದು, ಪಾಲ್ಸ್ ನಲ್ಲಿ ಈಜು ಹೊಡೆಯುವಾಗ ಮುಳುಗಿ ಸಾವನ್ನಪ್ಪಿದ್ದಾನೆ.
ಸ್ಥಳೀಯವಾಗಿ ಆರ್ ಎಸ್ ಎಸ್ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ನವೀನ ಕುಮಾರ ಸಂಗಡಿಗರೊಂದಿಗೆ ಪ್ರವಾಸಕ್ಕೆ ಬಂದಿದ್ದ ಎನ್ನಲಾಗಿದೆ. ಶಿರಸಿ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ ಐ ಈರಯ್ಯ ಹಾಗು ಶಾಮ ಪಾವಸ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.