• Slide
  Slide
  Slide
  previous arrow
  next arrow
 • ಮಾ.9 ರಿಂದ ಆರಂಭವಾದ ಸರಕು ಸಾಗಾಣೆ ವಾಹನ ತಪಾಸಣಾ ಅಭಿಯಾನ

  300x250 AD

  ಉತ್ತರಕನ್ನಡ: ಜಿಲ್ಲೆ ಹಲವು ವಾಣಿಜ್ಯ ರಸ್ತೆಗಳಿಂದ ಕೂಡಿರುವುದರಿಂದ ದಿನಂಪ್ರತಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತ್ಯಧಿಕ ಸರಕು ವಾಹನಗಳು ಸಂಚರಿಸುತ್ತವೆ. ಅದರಲ್ಲಿ ಅಪಾಯಕಾರಿ ರಸಾಯನಿಕ ಸರಕುಗಳನ್ನು ಗೋವಾ, ಹುಬ್ಬಳ್ಳಿ, ಬೆಳಗಾವಿ ಕಡೆಗೆ ಟ್ಯಾಂಕರ್‌ ಅಥವಾ ಇತರೇ ಬೃಹತ್‌ ವಾಹನಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಮೂಲಕ ಸಾಗಿಸಲಾಗುತ್ತದೆ. ಅಂತಹ ವಾಹನಗಳು ಅಪಘಾತಕ್ಕೀಡಾದರೆ ಅಪಾಯ ಹೆಚ್ಚು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸದರಿ ವಾಹನಗಳ ತಪಾಸಣಾ ಅಭಿಯಾನವನ್ನು ಉತ್ತರಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಮಾ. 09 ರಿಂದ ಅಭಿಯಾನ ಆರಂಭವಾಗಿದೆ.

  ಈ ಕೆಳಕಂಡ ಸೂಚನೆಗಳನ್ವಯ ಅಪಾಯಕಾರಿ ರಸಾಯನ ಸರಕು ಸಾಗಿಸುವ ವಾಹನಗಳ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

  300x250 AD
  1. ಅಪಾಯಕಾರಿ ರಸಾಯನಿಕ ಸರಕು ಸಾಗಿಸುವ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸುವ ಸಂದರ್ಭ ಇತರೆ ವಾಹನಗಳಿಗೆ ತೊಂದರೆಯಾಗದಂತೆ ಖುಲ್ಲಾ ಜಾಗವಿರುವ ಸ್ಥಳಗಳಲ್ಲಿ ತಪಾಸಣೆಗಾಗಿ ನಿಲ್ಲಿಸಿ ಸೂಕ್ತ ಕ್ರಮವಹಿಸಲಾಗುತ್ತಿದೆ.
  2. ವಾಹನಗಳ ಆರ್.ಸಿ. ಪರ್ಮಿಟ್, ಇನ್ಸೂರೆನ್ಸ್ ಪ್ರಮಾಣ ಪತ್ರ ಹಾಗೂ ಚಾಲಕನ ಚಾಲನಾ ಪತ್ರಗಳನ್ನು ತಪ್ಪದೇ ಪರಿಶೀಲಿಸಲಾಗುತ್ತಿದೆ.
  3. ಅಪಾಯಕಾರಿ ರಸಾಯನಿಕ ಸರಕುಗಳನ್ನು ಸಾಗಿಸುವ ವಾಹನಗಳ ಚಾಲಕನ ಚಾಲನಾ ಪತ್ರದಲ್ಲಿ Hazardous Validity ನಮೂದಿಸಿರುವುದನ್ನು ಪರಿಶೀಲಿಸಲಾಗುತ್ತಿದೆ.
  4. ರಾಷ್ಟ್ರೀಯ ಪರವಾನಿಗೆ (National Permit) ಇರುವ ವಾಹನದಲ್ಲಿ ಕಡ್ಡಾಯವಾಗಿ ಇಬ್ಬರು ಚಾಲಕರು ಇರುವುದನ್ನು ಪರಿಶೀಲಿಸಲಾಗುತ್ತಿದೆ.
  5. ಯಾವ ಸರಕು ಸಾಗಿಸಲಾಗುತ್ತದೆ, ಆ ಸರಕುಗಳ ಬಗ್ಗೆ Central Motor Vehicle Rule 137ನೇ ರಲ್ಲಿ ನಮೂದಿರುವಂತೆ ಲೇಬಲ್‌ಗಳನ್ನು ವಾಹನಕ್ಕೆ ಕಡ್ಡಾಯವಾಗಿ ಲಗತ್ತಿಸಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.
  6. ಸರಕು ವಾಹನಗಳ ಸಂಚಾರ ಮಾರ್ಗವನ್ನು ತಪ್ಪದೇ ಪರಿಶೀಲಸಲಾಗುತ್ತಿದೆ.
  7. ವಾಹನಗಳನ್ನು ಚಲಾಯಿಸುವ ಚಾಲಕರು ಮದ್ಯಪಾನ ಮಾಡಿ ಚಲಾಯಿಸುತ್ತಿದ್ದಾರಾ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
  8. ಅಲ್ಲದೆ ವಾಹನಗಳ ಮೆಕ್ಯಾನಿಕಲ್ ಡಿಫೆಕ್ಟ್ ಗಳನ್ನು ಆರ್.ಟಿ. ಓ. ಅಧಿಕಾರಿಗಳೊಂದಿಗೆ ಸೇರಿ ಪರಿಶೀಲಿಸುತ್ತಿದ್ದೇವೆ.
  Share This
  300x250 AD
  300x250 AD
  300x250 AD
  Leaderboard Ad
  Back to top