ಶಿರಸಿ:ಶ್ರೀನಿಕೇತನ ಶಾಲೆಗೆ ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್, ಡಿಸ್ಟ್ರಿಕ್ಟ್ 317ಬಿ,ಲಯನ್ ಶ್ರೀಕಾಂತ ಮೋರೆ, ವೈಸ್ ಗವರ್ನರ್ ಎಮ್.ಜೆ.ಎಫ್ ಲಯನ್ ಸುಗ್ಗಲಾ ಎಲಮಲಿ, ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಮ್.ಜೆ.ಎಫ್ ಲಯನ್ ಉದಯ ಸ್ವಾದಿ ಇವರು ಲಿಯೋ ಕ್ಲಬ್ ಶ್ರೀನಿಕೇತನ ಅಡ್ವೈಸರ್ ಲಯನ್ ಅಶೋಕ ಹೆಗಡೆ ಇವರೊಂದಿಗೆ ಶ್ರೀನಿಕೇತನ ಶಾಲೆಗೆ ಭೇಟಿ ನೀಡಿದರು.
ರಾಜರಾಜೇಶ್ವರೀ ವಿದ್ಯಾಸಂಸ್ಥೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ಲಿಯೋ ಕ್ಲಬ್ ಸದಸ್ಯರು ಇವರಿಗೆ ಸ್ವಾಗತ ಕೋರಿದರು.
ಬಳಿಕ ಎಲ್ಲ ಲಯನ್ಸ್ ಕ್ಲಬ್ ಶಿರಸಿ ಸದಸ್ಯರು, ಲಿಯೋ ಕ್ಲಬ್ ಶ್ರೀನಿಕೇತನ ಮಕ್ಕಳು, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ರಘುನಂದನ್ ಹೆಗಡೆ, ಶಾಲೆಯ ಮುಖ್ಯಾಧ್ಯಾಪಕರಾದ ವಸಂತ ಭಟ್ಟ ಹಾಗೂ ಲಿಯೋ ಸಂಯೋಜಕರಾದ ಕುಮಾರಿ ಆಶಾ ನಾಯ್ಕ, ಅಜಿತ್ ಹೆಗಡೆ ಇವರುಗಳ ಸಮ್ಮುಖದಲ್ಲಿ ಲಿಯೋ ಕ್ಲಬ್ ಶ್ರೀನಿಕೇತನ ಇದರ ನಾಮಫಲಕವನ್ನು ಡಿಸ್ಟ್ರಿಕ್ಟ್ ಗವರ್ನರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಿಸ್ಟ್ರಿಕ್ ಗವರ್ನರ್ ಔಷಧೀಯ ಸಸ್ಯಗಳ ವನ “ವನ ಸರಸ್ವತಿ” ಗೆ ಭೇಟಿ ನೀಡಿ ಮಾಹಿತಿ ಪಡೆದರು. ಅಂತಿಮವಾಗಿ ಶಾಲಾ ಆಡಳಿತ ಮಂಡಳಿಯವರು ಡಿಸ್ಟ್ರಿಕ್ಟ್ ಗವರ್ನರ್ ಹಾಗೂ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ನ್ನು ಸನ್ಮಾನಿಸಿದರು.