ಶಿರಸಿ: ಉತ್ತರ ಕನ್ನಡ ಜಿಲ್ಲೆಯ ವರದಿಗಳನ್ನು ಹೊತ್ತು ಜನರಿಗೆ ತಲುಪಿಸುವ ಉದ್ದೇಶದೊಂದಿಗೆ ‘ರಾಜ್ ನ್ಯೂಸ್ ಕರಾವಳಿ’ ಸುದ್ದಿವಾಹಿನಿಯ ಉದ್ಘಾಟನಾ ಸಮಾರಂಭ ಮಾ. 12 ಶನಿವಾರದಂದು ಶಿರಸಿಯ ಕುಮಟಾ ರಸ್ತೆಯಲ್ಲಿರುವ ರಾಜ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಕಾರ್ಮಿಕ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಆಗಮಿಸಲಿದ್ದಾರೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಿರಸಿ ನಗರ ಸಭೆ ಅಧ್ಯಕ್ಷ ಗಣಪತಿ ನಾಯ್ಕ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್, ಶಿರಸಿಯ ಉಪವಿಭಾಗಾಧಿಕಾರಿಗಳಾದ ದೇವರಾಜ್ ಆರ್, ಡಿಎಸ್ಪಿ ರವಿ ನಾಯಕ್, ಸುದ್ದಿವಾಹಿನಿಯ ವ್ಯವಸ್ಥಾಪಕ ರಾಜೀವ್ ಎಂ ಉಪಸ್ಥಿತರಿರುವರು.
ರಾಜ್ ನ್ಯೂಸ್ ಕರಾವಳಿ ಚಾನೆಲ್ ನ ಪ್ರಧಾನ ಸಂಪಾದಕರಾಗಿ ಜಿಲ್ಲೆಯ ಖ್ಯಾತ ಪತ್ರಕರ್ತ ಜೆ.ಆರ್. ಸಂತೋಷಕುಮಾರ, ಸುದ್ದಿ ಸಂಪಾದಕರಾಗಿ ವಿಶ್ವ ಮಳಲಗಾಂವ್ ಕಾರ್ಯನಿರ್ವಹಿಸಲಿದ್ದಾರೆ.