ಶಿರಸಿ: ಗೋವಾ ರಾಜ್ಯದಲ್ಲಿ ಗೆಲುವು ಸಾಧಿಸುವಲ್ಲಿ ತಮ್ಮದೇ ಆದ ವಿಶೇಷ ಸೇವೆಯನ್ನು ಸಲ್ಲಿಸಿರುವ, ರಾಜ್ಯದ ನಾಯಕರಾದ ಜಗದೀಶ ಶೆಟ್ಟರ ಅವರಿಗೆ ಭಾರತೀಯ ಜನತಾ ಪಕ್ಷದ ಮುಖಂಡ ಭಾಸ್ಕರ ಎನ್.ಜಿತೂರಿ, ಅಭಿನಂದನೆ ಸಲ್ಲಿಸಿದ್ದಾರೆ.
ದೇಶದ ಪ್ರಶ್ನಾತೀತ ನಾಯಕರಾದ ನರೇಂದ್ರ ಮೋದಿಯವರ ಸುಭದ್ರ ನಾಯಕತ್ವದಲ್ಲಿ , ಪಂಚ ರಾಜ್ಯಗಳ ಚುನಾವಣೆಯಲ್ಲಿ, 4 ರಾಜ್ಯಗಳಲ್ಲಿ ಸರ್ಕಾರ ರಚಿಸುವ ನಿಟ್ಟಿನಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ನಿರ್ದೇಶನ ನೀಡಿರುವ ನಾಲ್ಕು ರಾಜ್ಯಗಳ ಪ್ರಬುದ್ಧ ಮತದಾರರಿಗೂ ಸಹ ಶುಭ ಹಾರೈಸಿದ್ದಾರೆ.