ಶಿರಸಿ: ಕೇಂದ್ರದ ಪ್ರಭಾವಿ ಸಚಿವರಾದ ಪ್ರಹ್ಲಾದ ಜೋಶಿ ಸರ್ ಇವರಿಗೆ ಉತ್ತರಾಖಂಡ ಹಾಗೂ ಮಣಿಪುರದ ಚುನಾವಣಾ ಉಸ್ತುವಾರಿ ನೀಡಿದ್ದು,ಆ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಪೂರೈಸಿ, ಅಲ್ಲಿ ಗೆಲುವು ಸಾಧಿಸುವಲ್ಲಿ ತಮ್ಮದೇ ಆದ ವಿಶೇಷ ಸೇವೆಯನ್ನು ಸಲ್ಲಿಸಿರುವ, ಪ್ರಹ್ಲಾದ ಜೋಶಿ ಅವರಿಗೆ ಭಾರತೀಯ ಜನತಾ ಪಕ್ಷದ ಮುಖಂಡ ಭಾಸ್ಕರ ಎನ್.ಜಿತೂರಿ ಅಭಿನಂದನೆ ಸಲ್ಲಿಸಿದ್ದಾರೆ.
ದೇಶದ ಪ್ರಶ್ನಾತೀತ ನಾಯಕರಾದ ನರೇಂದ್ರ ಮೋದಿಜಿಯವರ ಸುಭದ್ರ ನಾಯಕತ್ವದಲ್ಲಿ, ಪಂಚ ರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಸರ್ಕಾರ ರಚಿಸುವ ನಿಟ್ಟಿನಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ನಿರ್ದೇಶನ ನೀಡಿರುವ ನಾಲ್ಕು ರಾಜ್ಯಗಳ ಪ್ರಬುದ್ಧ ಮತದಾರರಿಗೂ ಸಹ ಅಭಿನಂದಿಸಿದ್ದಾರೆ.