ಶಿರಸಿ: ರಾಜ್ಯದ ಸುಪ್ರಸಿದ್ಧ ಜಾತ್ರೆಗಳಲ್ಲೊಂದಾದ ಶಿರಸಿಯ ಮಾರಿಕಾಂಬಾ ಜಾತ್ರೆಗೆ ಕ್ಷಣಗಣನೆ ಆರಂಭಗೊಂಡಿದ್ದು , ಇದೀಗ ಭಕ್ತಾದಿಗಳಿಗೆ ಅಂಗೈಲ್ಲಿ ಮಾಹಿತಿ ದೊರೆಯಲಿದೆ. ಶಿರಸಿ ಪೊಲೀಸ್ ಇಲಾಖೆ ಹೊಸ ವೆಬ್ ಸೈಟ್ ಮೂಲಕ ಜಾತ್ರೆಯ ಸಂಪೂರ್ಣ ಮಾಹಿತಿ ದೊರೆಯುವಂತೆ ಮಾಡಲು ಮುಂದಾಗಿದೆ.
ಜಾತ್ರೆಯ ಸಂಪೂರ್ಣ ಮಾಹಿತಿ ಈ ವೆಬ್ ಸೈಟ್ ನಿಂದ ಲಭ್ಯವಾಗಲಿದ್ದು, ಎಲ್ಲೆಲ್ಲಿ ಪಾರ್ಕಿಂಗ್ ವ್ಯವಸ್ಥೆ, ಎಲ್ಲಿ ವಾಹನ ಸಂಚಾರ, ಎಲ್ಲಿ ಏಕಮುಖ ಸಂಚಾರ, ಮಕ್ಕಳು ಕಳೆದು ಹೋದಲ್ಲಿ ಮುಂತಾದ ವಿಶೇಷ ಮಾಹಿತಿಗಳನ್ನು ಇದರಲ್ಲಿ ಅಳವಡಿಸಲಾಗಿದೆ.
ವಿಶೇಷವಾಗಿ ಜಾತ್ರೆಯ ಸಂಪೂರ್ಣ ಚಿತ್ರಣ Sirsipolice.in ವೆಬ್ ಸೈಟ್ ನಲ್ಲಿ ದೊರಕಲಿದ್ದು ಪೊಲೀಸ್ ಸಹಾಯವಾಣಿಯ ನ೦ಬರ್‌ಗಳು, ಪೊಲೀಸ್ ಠಾಣೆಯ ನಂಬರ್‌ಗಳು, ಅಧಿಕಾರಿಗಳ ನಂಬರ್‌ಗಳು ನಂಬರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ ಹಾಗೂ ಡಿ.ಎಸ್.ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ಹಾಗೂ ಪಿ.ಎಸ್.ಐ. ರಾಜಕುಮಾರ ನೇತೃತ್ವದಲ್ಲಿ ವೆಬ್ ಸೈಟ್ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದು, ಯಾವುದೇ ತೊಂದರೆ ಬಂದರೂ ಒಂದು ಪೊನ್ ನಂಬರ್‌ಗೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇದನ್ನು ಕ್ರಿಯೆಟ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಶಿರಸಿ ಮಾರಿಕಾಂಬಾ ಜಾತ್ರೆಯ ಹೆಚ್ಚಿನ ಜವಾಬ್ದಾರಿ ಇರುವ ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.