ಭಟ್ಕಳ: ಅರಣ್ಯವಾಸಿಗಳನ್ನು ಉಳಿಸಿ ಜಾಗೃತ ಅಭಿಯಾನದ ಅಂಗವಾಗಿ ಸಂಘಟಿಸಿದ ಸಮಾವೇಶದಲ್ಲಿ ಅರಣ್ಯ ಅಧಿಕಾರಿಗಳ ಉಪಸ್ಥಿತಿಗೆ ಅಗ್ರಹ. ಸ್ಫಂಧಿಸದ ಅಧಿಕಾರಿಗಳ ವಿರುದ್ಧ ಧಿಕ್ಕಾರ. ಪೋಲೀಸ್ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ, ಅರಣ್ಯವಾಸಿಗಳ ಒತ್ತಡಕ್ಕೆ ಕೋನೆಗೂ ಸಭೆಗೆ ಆಗಮಿಸಿದ ಅರಣ್ಯ ಅಧಿಕಾರಿ, ಅರಣ್ಯವಾಸಿಗಳ ಸ್ಥಳೀಕ ಸಮಸ್ಯೆಗೆ ಮುಂದಿನ ಇಪ್ಪತ್ತು ದಿನಗಳಲ್ಲಿ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹೋರಾಟಗಾರರೊಂದಿಗೆ ಸಭೆ ಜರುಗಿಸುವ ಆಶ್ವಾಸನೆ ಪಡೆಯುವ ಮೂಲಕ ಬೃಹತ್ ಅರಣ್ಯವಾಸಿಗಳ ಸಭೆ ಯಶಸ್ವಿಯಾಗಿ ಜರುಗಿತು.
ಅರಣ್ಯವಾಸಿಗಳನ್ನು ಉಳಿಸಿ-ಜಾಥದ ಅಂಗವಾಗಿ ಭಟ್ಕಳದ ಪ್ರಮುಖ ಬಿದಿಗಳಲ್ಲಿ ಸಂಚರಿಸಿದ ಜಾಥವು ಬಿಲಾಲ್ ಸಭಾಂಗಣದದಲ್ಲಿ ಸಭೆಯಾಗಿ ಪರಿವರ್ತನೆಗೊಂಡ ನಂತರ ಸಮಸ್ಯೆಗಳಿಗೆ ಅಗ್ರಹಿಸಿ ಹೋರಾಟಗಾರರು ಬೀಗಿಪಟ್ಟು ಹೊಂದಿರುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಪೋಲೀಸರು ನಿಲುವಿನ ವಿರುದ್ಧ ಮಹಿಳಾ ಪೋಲೀಸರು ತೀವ್ರ ಪ್ರತಿರೋಧ ವ್ಯಕ್ತಪಡಿಸಿ, ಅರಣ್ಯವಾಸಿಗಳ ವಿರೋಧ ನೀತಿ ಅನುಸರಿಸಿದ ಅರಣ್ಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ಷೇಪ ಸಭೆಯಲ್ಲಿ ವ್ಯಕ್ತವಾದವು.
ಸಭೆಯ ತೀವ್ರತೆಯನ್ನು ಗಮನಿಸಿದ ಡಿವೈಎಸ್‍ಪಿ ಬೆಳ್ಳಿಯಪ್ಪ ಅವರು ಸ್ಥಳೀಕ ಅರಣ್ಯ ಅಧಿಕಾರಿ ಎಸಿಎಫ್ ಬೋರಯ್ಯ ಅವರನ್ನು ಸಂಪರ್ಕಿಸಿ ಸಭೆಗೆ ಕರೆತರುವಲ್ಲಿ ಯಶಸ್ವಿಯಾಗಿರುವುದು ಇಂದಿನ ವಿಶೇಷವಾಗಿತ್ತು.
ಆಶ್ವಾಸನೆ:
ಸಭೆಯ ನಡುವಳಿಕೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹಾಗೂ ಇನಾಯತ್ ಸಾಬಂದ್ರಿ ಅರಣ್ಯವಾಸಿಗಳ ಸಮಸ್ಯೆಗಳನ್ನು ಮಂಡಿಸಿದಾಗ ಎಸಿಎಫ್ ಬೋರಯ್ಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ, ಅವರು ಮುಂದಿನ ಇಪ್ಪತ್ತು ದಿನಗಳಲ್ಲಿ ಸ್ಥಳೀಕ ಅರಣ್ಯವಾಸಿಗಳ ಸಮಸ್ಯೆಗಳನ್ನ ಕಾನೂನಾತ್ಮಕವಾಗಿ ಬಗೆಹರಿಸಲು ಸ್ಥಳೀಯ ಅರಣ್ಯ ಇಲಾಖೆಯು ಬದ್ಧವಾಗಿದ್ದು, ಅರಣ್ಯ ಅಧಿಕಾರಿಗಳು ಅರಣ್ಯವಾಸಿಗಳ ಪರವಾಗಿದ್ದು, ಆತಂಕವಾಗಲಿ ಭಯಮೂಡಿಸುವ ಉದ್ದೇಶ ಇಲಾಖೆಯದ್ದು ಆಗಿದ್ದು ಇರುವುದಿಲ್ಲ. ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗೆ ಸ್ಫಂದಿಸಲು ಇಲಾಖೆ ಬದ್ಧವಾಗಿದೆ ಎಂದು ಹೇಳಿದರು.
ಮಹಿಳೆಯರಿಂದ ತೀವ್ರ ಆಕ್ರೋಶ:
ಸಭೆಯಲ್ಲಿ ಅರಣ್ಯ ಅಧಿಕಾರಿ ಮುಂದೆ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯ, ದೌರ್ಜನ್ಯ, ಮಾನಸಿಕ ಹಿಂಸೆ ವಿರುದ್ಧ ಹಾಜರಿದ್ದ ಮಹಿಳೆಯರು ತೀವ್ರ ಆಕ್ರೋಶಭರಿತವಾಗಿ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಧ್ಯಕ್ಷ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಹಾಗೂ ಕಾನೂನಾತ್ಮಕ ಹೋರಾಟದ ಕುರಿತು ವಿಶ್ಲೆಷಿಸಿದರು. ಹೋರಾಟಗಾರ ಇನಾಯತ್ ಸಾಬಂದ್ರಿ ಹೋರಾಟಕ್ಕೆ ಶಕ್ತಿ ಕೊಡುವ ದಿಶೆಯಲ್ಲಿ ಕಾರ್ಯ ಪ್ರವೃತ್ತರಾಗುವಂತೆ ಕರೆ ನೀಡಿದರೇ, ತಂಜೀಮ್ ಅಧ್ಯಕ್ಷ ಫರವೇಜ್ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಸಂಘಟನಾತ್ಮಕ ಹೋರಾಟದ ಹಿನ್ನೆಲೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ತಂಜೀಮ್‍ನ ಬೆಂಬಲವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಎ ಎಮ್ ಮುಲ್ಲಾ, ಪ್ರಸ್ತಾವನೆ ಜಿಲ್ಲಾ ಸಂಚಾಲಕ ಪಾಂಡುರಂಗ ನಾಯ್ಕ ಬೆಳಕೆ, ವಂದನಾರ್ಪಣೆ ಜಿಲ್ಲಾ ಸಂಚಾಲಕ ದೇವರಾಜ್ ಗೊಂಡ ಕೊನೆಯಲ್ಲಿ ವಂದಿಸಿದರು.
ವೇದಿಕೆಯ ಮೇಲೆ ತಾಸೀಫ್ ಬ್ಯಾರಿ, ಶಿವು ಮರಾಠಿ, ರಕ್ಮು ಮರಾಠಿ, ಕಯುಂ ಕೋಲಾ, ನಜೀರ್ ಕಾಸಿಂಜಿ, ರಿಜವಾನ್, ಶಬ್ಬೀರ್, ಲಕ್ಷ್ಮೀ ಮೋಗೇರ ಮುಂತಾದವರು ಉಪಸ್ಥಿತರಿದ್ದರು.