ಶಿರಸಿ:ಯಲ್ಲಾಪುರ ತಾಲೂಕಿನ ಚವತ್ತಿ ಕಾನಗೋಡಿನ ತಬಲಾ ವಾದಕ ಕಿರಣ ಕಾನಗೋಡ್ ರವರ ಮನೆಯಂಗಳದಲ್ಲಿ ಶಿರಸಿ ಜನನಿ ಮ್ಯೂಸಿಕ್ ಸಂಸ್ಥೆಯಿಂದ “ಸ್ವರ ಸಮ್ಮಿಲನ” ಸಂಗೀತ ಕಾರ್ಯಕ್ರಮ ಮಾ.13 ರ ಭಾನುವಾರ ಇಳಿಹೊತ್ತು 6 ಘಂಟೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಹಿತ್ಲಳ್ಳಿಯ ವೆಂಕಟ್ರಮಣ ಭಟ್ಟ ( ಶರ್ಮಾ ಭಟ್ಟ) ಉದ್ಘಾಟಿಸಲಿದ್ದಾರೆ. ಅಭ್ಯಾಗತರಾಗಿ ಬಿ.ಜೆ.ಪಿ. ಕಾರ್ಯಕಾರಿ ಸದಸ್ಯೆ ರೇಖಾ ಹೆಗಡೆ ಕಂಪ್ಲಿ ಹಾಗೂ ಉಮ್ಮಚಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಮತ್ತು ಸಾಮಾಜಿಕ ಕಾರ್ಯಕರ್ತ ಸುಧೀರ ಪಿ. ಭಲ್ಸೆ ಚವತ್ತಿ ಪಾಲ್ಗೊಳ್ಳಲಿದ್ದಾರೆ.
ಸಂಗೀತ ಕಾರ್ಯಕ್ರಮದಲ್ಲಿ ಯುವ ಗಾಯಕಿಯರಾದ ಸ್ನೇಹಾ ಅಮ್ಮಿನಳ್ಳಿ, ಸಂಪದಾ ಸತೀಶ್, ಹಾಡಲಿದ್ದು ಹಾರ್ಮೋನಿಯಂನಲ್ಲಿ ಸತೀಶ ಭಟ್ ಹೆಗ್ಗಾರ್ ಹಾಗೂ ತಬಲಾದಲ್ಲಿ ಕಿರಣ ಕಾನಗೋಡ ಸಹಕರಿಸಲಿದ್ದಾರೆ. ತದನಂತರದಲ್ಲಿ ನಡೆಯುವ ಗಾಯನದಲ್ಲಿ ಅನಿರುದ್ಧ ಐತಾಳ ಗಾನಕ್ಕೆ ಗಣೇಶ ಗುಂಡ್ಕಲ್, ಹೆಗ್ಗಾರ ಸತೀಶ ಸಾಥ ನೀಡಲಿದ್ದಾರೆ. ನಂತರದಲ್ಲಿ ಸಾರಂಗ್ ಕುಲ್ಕರ್ಣಿಯವರ ಹಾರ್ಮೋನಿಯಂ ಸೋಲೋದಲ್ಲಿ ತಬಲಾ ವಾದಕರಾಗಿ ಡಾ. ಶ್ರೀಹರಿ ದಿಗ್ಗಾವಿ, ಧಾರವಾಡ ಸಾಥ ನೀಡುವರು. ಸ್ವರ ಸಮ್ಮಿಲನ ಕೊನೆಯ ಹಂತವಾಗಿ ಶಿರಸಿಯ ರೇಖಾ ದಿನೇಶ ಗಾಯನ ನಡೆಸಿಕೊಡಲಿದ್ದು ತಬಲಾದಲ್ಲಿ ಡಾ. ಶ್ರೀಹರಿ ದಿಗ್ಗಾವಿ ಹಾಗೂ ಹಾರ್ಮೋನಿಯಂನಲ್ಲಿ ಸಾರಂಗ್ ಕುಲ್ಕರ್ಣಿ ಬೆಳಗಾಂವ ರವರು ಸಹಕರಿಸಲಿದ್ದಾರೆ.
ಸಂಪೂರ್ಣ ಉಚಿತ ಕಾರ್ಯಕ್ರಮಕ್ಕೆ ಸಂಗೀತಾಬಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕ ರಾಮಚಂದ್ರ ಸುಬ್ರಾಯ ಹೆಗಡೆ ಕಾನಗೋಡ ಕೆರೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.