• Slide
  Slide
  Slide
  previous arrow
  next arrow
 • ಭಟ್ಕಳದಲ್ಲಿ ಅರಣ್ಯವಾಸಿಗಳನ್ನು ಉಳಿಸಿ ಬೃಹತ್- ಜಾಥ; ಅರಣ್ಯವಾಸಿ ಸಮಸ್ಯೆಗಳ ಸ್ಫಂದನೆಗೆ ಅಗ್ರಹ

  300x250 AD

  ಭಟ್ಕಳ: ತಾಲೂಕಾದ್ಯಂತ ಆಗಮಿಸಿದ ಸಹಸ್ರಾರು ಸಂಖ್ಯೆಯ ಅರಣ್ಯವಾಸಿಗಳು ಜಾಥಕ್ಕೆ ಪಾಲ್ಗೋಳ್ಳುವಿಕೆಯಿಂದ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ವ್ಯಾಪಕ ಜಾಗೃತ ಮೂಡಿಸುವ ಹಾಗೂ ಸರಕಾರ ಅರಣ್ಯವಾಸಿ ಸಮಸ್ಯೆಗೆ ಸ್ಫಂದಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳನ್ನ ಉಳಿಸಿ- ಜಾಥವು ಭಟ್ಕಳ ತಾಲೂಕಿನಲ್ಲಿ ಯಶಸ್ವಿಯಾಗಿ ಜರುಗಿತು.

  ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಇಂದು ಭಟ್ಕಳ ತಾಲೂಕಿನ ಪ್ರವಾಸಿ ಮಂದಿರದ ಪ್ರವೇಶ ದ್ವಾರದಿಂದ ನಗರದ ಪ್ರಮುಖ ಬಿದಿಗಳ ಮೂಲಕ ಜಾಥವು ಹೋರಾಟದ ಭಾವುಟ, ವಾದ್ಯ, ಘೋಷಣೆಗಳೊಂದಿಗೆ ಉತ್ಸಾಹದಿಂದ ಅರಣ್ಯವಾಸಿಗಳು ಪಾಲ್ಗೊಂಡಿದ್ದರು.

  ರಾಜ್ಯ ಮಟ್ಟದ ಕಾರ್ಯಕ್ರಮದ ಅಂಗವಾಗಿ ಪ್ರಥಮ ಹಂತದಲ್ಲ ಜಿಲ್ಲೆಯಲ್ಲಿ ಹತ್ತುಸಾವಿರ ಕೀ.ಮೀ ಸಂಚರಿಸುವ ಹೋರಾಟ ವಾಹಿನಿ 500 ಹಳ್ಳಿಗಳಿಗೆ 30 ದಿನಗಳಲ್ಲಿ ತಿರುಗಾಟಮಾಡಲಿದ್ದು, ಅರಣ್ಯವಾಸಿಗಳ ಹಳ್ಳಿಗಳಲ್ಲಿ ಹೋರಾಟ ವಾಹಿನಿ ಮೂಲಕ ಕಾನೂನು ಜಾಗೃತೆ ಮೂಡಿಸುವ ಕಾರ್ಯಕ್ರಮವು ಇಂದು ಭಟ್ಕಳ ತಾಲೂಕಿನಾದ್ಯಂತ ಅರಣ್ಯವಾಸಿಗಳಲ್ಲಿ ಸಂಚಲನ ಮೂಡಿಸಲು ಯಶಸ್ವಿಯಾಗಿದೆ.

  300x250 AD

  ಜಾಥದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರಂಗ ನಾಯ್ಕ ಬೆಳಕೆ, ಹಿರಿಯ ಧುರೀಣರಾದ ಇನಾಯತ ಸಾಬಂದ್ರಿ, ರಿಜವಾನ, ಕಯುಂ, ಚಂದ್ರು ನಾಯ್ಕ, ತಂಜೀಮ್ ಅಧ್ಯಕ್ಷ ಫರವೇಜ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್, ಜಾಸೀಬ್ ಬ್ಯಾರಿ, ಕಯುಂ ಕೋಲೋ, ನಜೀರ್ ಖಾಶಿಮ್‍ಜಿ, ಶಿವು ಮರಾಠಿ, ರುಕ್ಯ ಮರಾಠಿ, ಸೋಮ್ಯ ಗೊಂಡ, ಫರಿದಾ ಬಾನು, ಲಕ್ಷ್ಮೀ, ಶಾಂತಿ ಮೋಗೇರ್, ಸುಬ್ಬಯ್ಯ ಗೊಂಡ ಮುಂತಾದವರು ನೇತ್ರತ್ವ ವಹಿಸಿದ್ದರು.

  ಜಾಥಕ್ಕೆ ಚಾಲನೆ: ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯವಾಸಿಗಳನ್ನು ಉಳಿಸಿ-ಜಾಥಕ್ಕೆ ಸಂಘನೆಯ ಭಾವುಟವನ್ನ ಪ್ರದರ್ಶಿಸುತ್ತಾ ಚಾಲನೆ ನೀಡಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top