ಶಿರಸಿ:ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜರುಗಿದ ಬಾಲ್ ಬ್ಯಾಡಮಿಂಟನ್ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ‘ಯುನಿವರ್ಸಿಟಿ ಬ್ಲೂ’ ಆಗಿ ಇದೀಗ ಮಾ.10 ರಿಂದ ಮಾ.14 ರವರೆಗೆ ತಮಿಳುನಾಡಿನ B.S.Abdur Rehman Crescent Inst.of Sci.Tech University Chennai ನಲ್ಲಿ ನಡೆಯುವ ರಾಷ್ಟ್ರಮಟ್ಟದ ಬಾಲ್ ಬ್ಯಾಡಮಿಂಟನ ಸ್ಫರ್ಧೆಗೆ ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕುಮಾರ ಲಖನ್ ಜವಳಿ,ನಿಹಾಲ ನಾಯ್ಕ ಮತ್ತು ಪ್ರಸನ್ನ ಹೆಗಡೆ ತೆರಳಿದ್ದಾರೆ.
ಇವರ ಸಾಧನೆಗೆ ಎಂ.ಇ.ಎಸ್. ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಕಾಲೇಜು ಸಮಿತಿ ಚೇರಮನ್ ವರೀಂದ್ರ ಕಾಮತ್, ಪ್ರಾಚಾರ್ಯ ಡಾ.ಎಸ್ ಕೆ ಹೆಗಡೆ ಹಾಗೂ ಆಡಳಿತ ಮಂಡಳಿಯ ಸದಸ್ಯರು,ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿದ್ದಾರೆ.