• Slide
    Slide
    Slide
    previous arrow
    next arrow
  • ಮಾ.12ಕ್ಕೆ ಶಿರಸಿಯಲ್ಲಿ ಹಿಲಾಲು ಬೆಳಕಿನ ಯಕ್ಷಗಾನ; ಸಮ್ಮಾನ

    300x250 AD

    ಶಿರಸಿ: ಕುಮಟಾದ ಯಕ್ಷಗಾನ ಸಂಶೋಧನಾ‌ ಕೇಂದ್ರ ಹಮ್ಮಿಕೊಂಡ ‌ಹಿಲಾಲು ಬೆಳಕಿ‌ನ ಯಕ್ಷಗಾನ ಹಾಗೂ ಸಮ್ಮಾನ ಕಾರ್ಯಕ್ರಮ ಮಾ.12 ರ ಸಂಜೆ 6 ಗಂಟೆಗೆ ನಡೆಯಲಿದೆ.

    ಕಾರ್ಯಕ್ರಮಕ್ಕೆ ಪರಿಸರ ಪತ್ರಕರ್ತ ಶಿವಾನಂದ‌ಕ ಕಳವೆ ಉದ್ಘಾಟಿಸಲಿದ್ದು,ಅಧ್ಯಕ್ಷತೆಯನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಜೀವ ಜಲ‌ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಪಾಲ್ಗೊಳ್ಳಲಿದ್ದಾರೆ.

    ಯಕ್ಷಗಾನ ಸಂಶೋಧಕ ಡಾ. ಎಸ್.ಡಿ.ಹೆಗಡೆ ಅವರಿಗೆ ಸನ್ಮಾನ ಮಾಡಲಾಗುತ್ತಿದ್ದು, ಅಭಿನಂದನಾ‌ ನುಡಿಯನ್ನು ಯಕ್ಷರಂಗದ ಕಡತೋಕಾ ಗೋಪಾಲಕೃಷ್ಣ ಭಾಗವತ ಆಡಲಿದ್ದಾರೆ.

    300x250 AD

    ಹಿಡಿಂಬಾ ವಿವಾಹ ಯಕ್ಷಗಾನದ ಹಿಮ್ಮೇಳದಲ್ಲಿ ಶ್ರೀಪಾದ ಹೆಗಡೆ ಬಾಳೆಗದ್ದೆ, ನರಸಿಂಹ ಭಟ್ ಹಂಡ್ರಮನೆ, ವಿಘ್ನೇಶ್ವರ ಕೆಸರಕೊಪ್ಪ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಸುಬ್ರಹ್ಮಣ್ಯ‌ ಮೂರೂರು, ಗಣಪತಿ ಭಟ್ಟ‌ ಮುದ್ದಿನಪಾಲು, ನಾಗರಾಜ್ ಜೋಶಿ ಸೋಂದಾ, ನಿರಂಜನ‌ ಜಾಗನಳ್ಳಿ, ಸಂತೋಷ ಕಡಕಿನಬಯಲು, ವೆಂಕಟ್ರಮಣ ಕಡಬಾಳ ಹಾಗೂ ಸಹ ಕಲಾವಿದರು ಭಾಗವಹಿಸಲಿದ್ದಾರೆ.

    ಹಿಲಾಲು ಬೆಳಕಿನ ಆಟದ ಸಂಯೋಜನೆಯನ್ನು ನಾಗರಾಜ ಜೋಶಿ ಸೋಂದಾ ಮಾಡಿದ್ದಾರೆ ಎಂದು ಸಂಶೋಧನಾ ಕೇಂದ್ರದ ಕಾರ್ಯದರ್ಶಿ ವಸಂತ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top