ಶಿರಸಿ:ಹುಲೇಕಲ್ ಮಾರ್ಗದ ಕಲ್ಗಾರ್ ಒಡ್ಡುವಿನಲ್ಲಿ ಗಾನ ವೈಭವ ಕಾರ್ಯಕ್ರಮ ಮಾ.11ರ ಸಂಜೆ 5.15 ರಿಂದ ಆಯೋಜಿಸಲಾಗಿದೆ.
ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಕಾವ್ಯಶ್ರೀ ಅಜೇರು, ಮದ್ದಲೆ ವಾದಕರಾಗಿ ಎ.ಪಿ.ಪಾಠಕ್, ಚಂದ್ರಶೇಖರ ಆಚಾರ್ಯ, ಚಂಡೆ ವಾದನದಲ್ಲಿ ಗಣೇಶ ಗಾಂವ್ಕರ್ ಮತ್ತು ಪ್ರಸನ್ನ ಭಟ್ಟ ಹೆಗ್ಗಾರ ಭಾಗವಹಿಸುವರು ಎಂದು ಸಂಘಟಕರಾದ ಮಂಜುನಾಥ ಭಟ್ಟ ಮತ್ತು ದಿನೇಶ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.