ಮುಂಡಗೋಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪನ್ನೇಕರ್ ಅಧಿಕಾರಿ ಸ್ವೀಕರಿಸಿದ ನಂತರ ಅವರು ಇಲ್ಲಿನ ಪೊಲೀಸ್ ಠಾಣೆಗೆ ಸೋಮವಾರ ಮೊದಲ ಬಾರಿ ಭೇಟಿ ನೀಡಿ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿದರು.
ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿದ ವರಿಷ್ಠಾಧಿಕಾರಿಗಳು, ಸಿಬ್ಬಂದಿಗಳ ಸಮಸ್ಯೆ ಇದ್ದರೆ ಹೇಳಿ ಕೂಡಲೇ ಬಗೆ ಹರಿಸುವುದಾಗಿ ಹೇಳಿದರು, ತಕ್ಷಣ ಮಾತನಾಡಿದ ಸಿಬ್ಬಂದಿಗಳು ಕಳೆದ ಮೂರು ತಿಂಗಳಿಂದ ಬೇರೆ ಜಿಲ್ಲಾ ಘಟಕದಿಂದ ಬಂದವರ ವೇತನ ಬಂದಿಲ್ಲವೆಂದು ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ವರಿಷ್ಠಾಧಿಕಾರಿಗಳು ತಿಳಿಸಿದರು. ಕಾಲ ಮಿತಿಯಲ್ಲಿ ನಮ್ಮ ಟಾಂ ಬಾಂಡ್ ಅರಿಯರ್ಸ ತಕ್ಷಣ ಮಾಡಿಕೊಡುವಂತೆ ವಿನಂತಿಸಿದರು. ನಿಮ್ಮ ಯಾವುದೇ ಸಮಸ್ಯೆ ಇದ್ದರು ಸಿಪಿಐ ಅವರಿಗೆ ವರದಿ ಸಲ್ಲಿಸುವಂತೆ ಎಸ್.ಪಿ ಅವರು ತಿಳಿಸಿದರು. ಹಾಗೂ ಅಲ್ಲಿಯೆ ಇದ್ದ ಸಿಪಿಐ ಅವರನ್ನು ಕರೆದು ಸಮಸ್ಯೆ ಇರುವ ಸಿಬ್ಬಂದಿಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೂಡಲೇ ಒಪ್ಪಿಸಬೇಕು ಎಂದು ಸೂಚಿಸಿದರು.
ಇದಕ್ಕೂ ಮೊದಲು ಜಿಲ್ಲಾ ವರಿಷ್ಠಾಧಿಕಾರಿ ಡಾ ಸುಮನ್.ಡಿ.ಪನ್ನೇಕರ ಅವರು ಸಿಪಿಐ ಮತ್ತು ಸಿಬ್ಬಂದಿಗಳಿಂದ ಗೌರವ ವಂದನೆ ಸ್ವೀಕರಿಸಿ. ಠಾಣೆಯ ಆವರಣದಲ್ಲಿ ಸಸಿ ನೆಟ್ಟರು. ಈ ಸಂದರ್ಭದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್‍ಐ ಬಸವರಾಜ ಮಬನೂರ ಸಿಬ್ಬಂದಿಗಳು ಉಪಸ್ಥಿತರಿದ್ದರು.