ಮುಂಡಗೋಡ:ತಾಲೂಕಿನ ಇಂದೂರ ಗ್ರಾಮದ ಮಹಿಳೆಯನ್ನು ತಾಲೂಕು ಆಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ವರೂರ ಬಳಿ ಹೆರಿಗೆ ನೋವು ತೀವ್ರವಾಗಿದ್ದು, ಆಂಬುಲೆನ್ಸ್‍ನಲ್ಲಿ ಹೆರಿಗೆಯಾಗಿದೆ.
ದಾವಲಬಿ ಮಾಬೂಷಾ ಹನಕನಹಳ್ಳಿ ಎಂಬಾಕೆ ಆಂಬುಲೆನ್ಸ್‍ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾಳೆ.
ದಾವಲಬಿ ಅವರಿಗೆ ಬಿಪಿ ಜಾಸ್ತಿ ಇದೆ ಮತ್ತು ಮೊದಲನೇ ಹೆರಿಗೆ ಎಂದು ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದಾರೆ. ತಾಲೂಕು ಆಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ವರೂರ ಬಳಿ ದಾವಲಬಿ ಅವರಿಗೆ ಹೆರಿಗೆ ನೋವು ಜಾಸ್ತಿ ಆಗಿದೆ. ರಸ್ತೆ ಪಕ್ಕಕ್ಕೆ ಆಂಬುಲೆನ್ಸ್ ನಿಲ್ಲಿಸಿ ತುರ್ತು ವೈದ್ಯಕೀಯ ತಜ್ಞ ಧನರಾಜ ಸಿ. ಬಳೂರು ಮತ್ತು ಚಾಲಕ ಕೆಂಚೇಶ ಇ.ಎನ್. ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ ದಾವಲಬಿ ಮತ್ತು ಹೆಣ್ಣು ಮಗು ಆರೋಗ್ಯವಾಗಿದ್ದಾರೆ.