ಮುಂಡಗೋಡ: ಉಕ್ರೇನ್‍ನಿಲ್ಲಿ ಸಿಲುಕಿಕೊಂಡಿದ್ದ ಪಟ್ಟಣದ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ನಾಜಿಲ್ಲಾ ಗಾಜಿಪೂರ ಸುರಕ್ಷಿತವಾಗಿ ಸೋಮವಾರ ಸಂಜೆ ತಮ್ಮ ಮನೆಗೆ ಮರಳಿದ್ದಾರೆ.
ಸೋಮವಾರ ಹಂಗೇರಿ ದೇಶದ ಗಡಿ ಬಾಗದಿಂದ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಬೆಳ್ಳಿಗೆ ಮುಂಬೈನಿಂದ ಸಂಜೆ ಹುಬ್ಬಳ್ಳಿಗೆ ಬಂದಿಳಿದರು. ನಾಜಿಲಾ ಪೋಷಕರು ಮತ್ತು ಸ್ನೇಹಿತರು ಸಂತಸದಿಂದ ಬರಮಾಡಿಕೊಂಡರು.
ನಾನು ಒಂದು ತಿಂಗಳ ಹಿಂದೆ ಅಷ್ಟೇ ಉಕ್ರೇನಿಗೆ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡಲು ಹೋಗಿದ್ದೆ. ನಮ್ಮ ತಂದೆ ಟೇಲರಿಂಗ್ ಕೆಲಸ ಮಾಡುತ್ತಾರೆ. ನಾವು 5 ಹೆಣ್ಣು ಮಕ್ಕಳು. ನಮ್ಮ ತಂದೆ ಒಬ್ಬರೆ ದುಡಿಯಬೇಕು. ಅವರು ಕಷ್ಟಪಟ್ಟು ನನ್ನನ್ನು ವ್ಯಾಸಂಗಕ್ಕೆ ಕಳಿಸಿದರು. ಈ ರೀತಿ ಆಗುತ್ತದೆ ಎಂಬ ಆಲೋಚನೆ ಮಾಡಿರಲಿಲ್ಲ. ಮಾರ್ಚ 24ರಂದು ರಷ್ಯಾ ಸೈನಿಕರು ಬಾಂಬ್ ದಾಳಿ ನಡೆಸಿದರು. ಎರಡು ದಿನಗಳ ಕಾಲ ಏನು ಅನಿಸಲಿಲ್ಲ. ಎರಡು ದಿನಗಳ ನಂತರ ಬೆಳಿಗ್ಗೆ ಖಾರ್ಕೀವನ ಪ್ರದೇಶಲ್ಲಿ ಬಾಂಬ್ ದಾಳಿ ನಡೆಸಲು ಆರಂಭಿಸಿದರು. 400 ವಿದ್ಯಾರ್ಥಿಗಳಲ್ಲೇರು ಒಂದು ಬಂಕರ್ ನಲಿದ್ದೆವು. ಅಲ್ಲಿ ವಿದ್ಯುತ ಸಂಪರ್ಕ ಇಲ್ಲವಾಗಿತ್ತು. ಅಲ್ಲದೆ ಆಹಾರ, ನೀರು ಎಲ್ಲರಿಗೂ ಮುಟ್ಟುತ್ತಿರಲಿಲ್ಲ.
ನಮ್ಮ ಭದ್ರತೆಗಾಗಿ ಮೊಬೈಲಗಳನ್ನು ಸ್ವೀಚ್‍ಆಪ್ ಮಾಡಿಸಿದ್ದರು. 8 ದಿನಗಳ ಕಾಲ ಬಂಕರ್ನಲ್ಲಿ ದಿನ ಕಳೆದಿದ್ದೇನೆ. 8 ದಿನದ ನಂತರ ಹೊರಬಂದು ಒಬ್ಬರ ಸಹಾಯದಿಂದ ರೈಲ್ವೆ ಸ್ಟೇಶನ್’ಗೆ ತೆರಳಿದೆ. ಅಲ್ಲಿಂದ 4 ಗಂಟೆಯವರೆಗೆ ಕಾದೆವು. ರೈಲು ಬಂದ ನಂತರ ವಿದ್ಯಾರ್ಥಿನಿಯರಿಗೆ ಮಾತ್ರ ಸೀಟ್ ಸಿಕ್ಕಿತ್ತು. 28 ಗಂಟೆಯ ವರೆಗೆ ಪ್ರಯಾಣ ನಡೆಸಿದ್ದೇನೆ. ಕೀವ್ ಪ್ರದೇಶ ತಲುಪುತ್ತಿದಂತೆ ಬಾಂಬ್ ಮತ್ತು ಕ್ಷಿಪಣಿಗಳ ದಾಳಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿತ್ತು. ಕೀವ್‍ನಲ್ಲಿ 3 ಗಂಟೆಯವರೆಗೆ ಪ್ರಯಾಣ ನಿಲ್ಲಿಸಬೇಕಾಯಿತು. ಈ 28 ಗಂಟೆಯ ವರೆಗೂ ನಾವು ಆಹಾರ ನೀರು ಇಲ್ಲದೆ ಪರದಾಡುವಂತಾಯಿತು. ಮರು ದಿನ ಪ್ಲವಿಂಗ್ ಪ್ರದೇಶಕ್ಕೆ ಮುಟ್ಟಿ ಅಲ್ಲಿಂದ ನವಿಂಗ್ ತಲುಪಿದ ನಂತರ ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿಕೊಂಡು ಹಂಗೇರಿ ಗಡಿ ಪ್ರದೇಶಕ್ಕೆ ಬರಲು ಒಂದು ದಿನ ತೆಗೆದಕೊಳ್ಳಬೇಕಾಯಿತು. ಹಂಗೇರಿ ಗಡಿಯ ಹತ್ತಿರ ಎಂಬಿಎಸ್ ಅವರು ಬಂದು ನಮ್ಮನ್ನು ಚೆನ್ನಾಗಿ ನೋಡಿಕೊಂಡರು ಎಂದು ನಾಜಿಲ್ಲಾ ತಮ್ಮ ಅನುಭವವನ್ನು ಹಚ್ಚಿಕೊಂಡರು.
ನಮ್ಮ ತಂದೆ-ತಾಯಿ ಕಷ್ಟಪಟ್ಟು ದುಡಿಮೆಯಿಂದ ವ್ಯಾಸಂಗಕ್ಕೆ ಕಳಸಿದ್ದರು. 8.5 ಲಕ್ಷ ರೂ ಹಣವನ್ನು ಮೊದಲನೆ ಹಣ ಕಟ್ಟಿದ್ದೇವೆ. ಇದು ಮರಳಿ ನೀಡುತ್ತಾರೆ ಎಂಬ ನಂಬಿಕೆ ಇಲ್ಲ. ಮತ್ತು ಕಾಲೇಜಿನಿಂದ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮುಂದಿನ ನಮ್ಮ ಶಿಕ್ಷಣದ ಭವಿಷ್ಯ ತಿಳಿದಂತಾಗಿದೆ. ಕೇಂದ್ರ ರಾಜ್ಯ ಸರಕಾರದಿಂದ ಸಹಾಯ ಮಾಡಿದರೆ ವಿಧ್ಯಾಭ್ಯಾಸ ಮಾಡುತ್ತೇವೆ ಎಂದರು.