• Slide
  Slide
  Slide
  previous arrow
  next arrow
 • ಮಹಿಳೆ ಮನುಕುಲದ ಮಮತೆಯ ತೊಟ್ಟಿಲು; ನಾಗರಾಜ ಎಮ್

  300x250 AD

  ಯಲ್ಲಾಪುರ:ಮಹಿಳೆ ಕರುಣೆಯ ಕಡಲು. ಇಡೀ ಮನುಕುಲದ ಮಮತೆಯ ತೊಟ್ಟಿಲು. ಅಗಾಧ ಸಹಹನೆಯುಳ್ಳ ತಾಯಿ. ಹಾಗಾಗಿಯೇ ನಮ್ಮ ದೇಶದಲ್ಲಿ ಅವಳನ್ನು ಅತ್ಯಂತ ಗೌರವದಿಂದ ಕಾಣುತ್ತೇವೆ.1857 ರಲ್ಲಿ ಗಾರ್ಮೆಂಟ್ಸ್ ಕಾರ್ಮಿಕರು ನಡೆಸಿದ ಹೋರಾಟದ ಫಲವಾಗಿ, 1975 ರಿಂದ ಮಹಿಳಾ ದಿನಾಚರಣೆ ಆರಂಭವಾಯಿತು ಎಂದು ಶಿಕ್ಷಕ ನಾಗರಾಜ ಎಮ್ ಹುಡೇದ ಹೇಳಿದರು.

  ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೈಲಂದೂರ ಗೌಳಿವಾಡ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ ನಮ್ಮ ದೇಶದಲ್ಲಿ ಸಾವಿತ್ರಿ ಬಾಯಿ ಫುಲೆ, ಕಲ್ಪನಾ ಚಾವ್ಲಾ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಮದರ್ ತೇರೆಸಾ , ಮೇರಿ ಕೋಮ್, ಸೈನಾ ನೆಹ್ವಾಲ್ ಮುಂತಾದ ಅನೇಕ ಮಹಿಳೆಯರು ಶ್ರೇಷ್ಠ ಸಾಧನೆಯನ್ನು ಮಾಡಿದ್ದಾರೆ. ಅವರ ದಾರಿಯಲ್ಲಿ ನಾವು ನಡೆಯಬೇಕು. ಮಹಿಳೆಯರ ಬಗ್ಗೆ ಸದಾ ಗೌರವ ಭಾವನೆ ಇರಬೇಕು. ಅವರಲ್ಲಿಯೂ ಸಾಕಷ್ಟು ಪ್ರತಿಭೆ ಇರುತ್ತದೆ ಎಂದರು.

  300x250 AD

  ಕಾರ್ಯಕ್ರಮದಲ್ಲಿ ಕಾರ್ಮಿಕ ವರ್ಗದ ಯಶೋದಾ ವಡ್ಡರ, ಮಂಗಲಾ ವಡ್ಡರ, ನಕಲಿ ಬಾಯಿ ಪಟಕಾರೆ, ಸಾವಿ ಬಾಯಿ ಥೋರತ್, ಭಾಗೀರಥಿ ಕೋಕರೆ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ನಾರಾಯಣ ಜಿ ಕಾಂಬಳೆ ಸ್ವಾಗತಿಸಿದರು. ನಂತರ ಸಿಹಿ ವಿತರಿಸುವ ಮೂಲಕ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.

  Share This
  300x250 AD
  300x250 AD
  300x250 AD
  Leaderboard Ad
  Back to top