ಶಿರಸಿ:ಭಾರತ ಸೇವಾದಳ ಜಿಲ್ಲಾ ಸಮಿತಿ ಶಿರಸಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಶಿರಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾಗೃತಿ ಶಿಬಿರವನ್ನು ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ಮಾ.8 ರಂದು ನಡೆಯಿತು.
ರಾಜಯೋಗಿನಿ ಬಿ.ಕೆ. ವೀಣಾಜೀ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಇವರು ಜ್ಯೋಗಿ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತ ಕಷ್ಟಬಂದಾಗ ದೈರ್ಯದಿಂದ ಎದುರಿಸಬೇಕು ಆತ್ಮಹತ್ಯೆ ಇದಕ್ಕೆ ಪರಿಹಾರವಲ್ಲ, ಶಿಸ್ತುಬದ್ಧವಾಗಿ ಸೇವೆ ಮಾಡುತ್ತ ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆಯೋಣ ಎಂದು ತಿಳಿಸಿದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷರಾದ ವಿ. ಎಸ್. ನಾಯಕ ಅಧ್ಯಕ್ಷತೆ ವಹಿಸಿ ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ದತ್ತಾತ್ರಯ ಭಟ್ಟ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ವಸಂತ ಭಂಡಾರಿ, ಮಹಿಳಾ ಸಾಂತ್ವನ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಭಟ್, ಸ್ವಾದಾರ ಸಂಸ್ಥೆಯ ಶ್ರೀಮತಿ ದಾನೇಶ್ವರಿ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಮತಿ ವೀಣಾ ಭಟ್ಟ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಜಿಲ್ಲಾ ಸಮಿತಿ ಸದಸ್ಯರಾದ ಕೆ.ಎನ್. ಹೊಸಮನಿ, ಶಿಕ್ಷಣ ಮತ್ತು ಮಹಿಳೆ ಈ ವಿಚಾರವಾಗಿ ಉಪನ್ಯಾಸ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗೌರಿ ಸಿ. ನಾಯ್ಕ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಸಂಘಟಕರಾದ ರಾಮಚಂದ್ರ ಹೆಗಡೆ, ಸೇವಾದಳ ಕುರಿತು ಹಾಗೂ ರಾಷ್ಟ್ರಧ್ವಜದ ಬಗ್ಗೆ ಮಾಹಿತಿ ಈಡಿದರು.
ವಿದ್ಯಾವತಿ ಆರ್. ಹೆಗಡೆ, ಜಡ್ಡಿಗದ್ದೆ ಅಂಗನವಾಡಿ ಕಾರ್ಯಕರ್ತೆಯನ್ನು ಸನ್ಮಾನಿಸಿ ಗೌರವಿಸಲಾಯಿತು. 110 ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಲ್ಲ ಶಿಬಿರಾರ್ಥಿಗಳಿಗೆ ಸೆನಿಟೈಸರ್ ಮತ್ತು ಮಾಸ್ಕ ನೀಡಿ ಕರೋನಾ ಜಾಗೃತಿ ಬಗ್ಗೆ ಮಾಹಿತಿ ನೀಡಲಾಯಿತು.
ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರಾಮಚಂದ್ರ ಹೆಗಡೆ ಜಿಲ್ಲಾ ಸಂಘಟಕರು ಪ್ರಾಸ್ತಾವಿಕ ನುಡಿದರೆ ಅಶೋಕ ಭಜಂತ್ರಿ ಶಿಕ್ಷಕರು ಸರ್ವರನ್ನೂ ಸ್ವಾಗತಿಸಿದರು. ಕುಮಾರ ನಾಯ್ಕ ಹಿರಿಯ ಕಾರ್ಯಕರ್ತರು ನಿರ್ವಹಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಮಾಡಲಾಯಿತು.