• Slide
  Slide
  Slide
  previous arrow
  next arrow
 • ಸವಿತಾ ಸಮಾಜದಿಂದ ಸವಿತಾ ಮಹರ್ಷಿ ಜಯಂತಿ ಆಚರಣೆ; ಪ್ರತಿಭಾ ಪುರಸ್ಕಾರ

  300x250 AD

  ಸಿದ್ದಾಪುರ:ಪಟ್ಟಣದ ರಾಘವೇಂದ್ರ ಮಠದ ಸಭಾಂಗಣದಲ್ಲಿ ತಾಲೂಕು ಸವಿತಾ ಸಮಾಜ ಸಂಘದ ಆಶ್ರಯದಲ್ಲಿ ಸವಿತಾ ಮಹರ್ಷಿ ಜಯಂತಿ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ವೃತ,ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

  ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೊಂಚೂರು ಸವಿತಾ ಪೀಠದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಸವಿತಾ ಸಮಾಜದ ಮಠ ಕಟ್ಟಲು ಸರ್ಕಾರ ಅನುದಾನ ನೀಡಬೇಕು ಎಂದು ಕೇಳುವುದಿಲ್ಲ. ಆದರೆ ಸವಿತಾ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು. ಶೈಕ್ಷಣಿಕವಾಗಿ ಸಮಾಜದವರು ಮುಂದೆ ಬರಲು ಆರ್ಥಿಕ ಸಹಕಾರ ನೀಡಬೇಕು.ಮಠವನ್ನು ಭಕ್ತರ ಹಾಗೂ ಶಿಷ್ಯರ ಸಹಕಾರದೊಂದಿಗೆ ಕಟ್ಟುತ್ತೇವೆ. ಮಠ ಕಟ್ಟುವುದಕ್ಕೆ ನೀಡುವ ಹಣವನ್ನು ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ನೀಡಿ ಸರ್ಕಾರ ವಿವಿಧ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಆದರೆ ಸವಿತಾ ಸಮಾಜಕ್ಕೆ ಮಾತ್ರ ಸೀಮಿತವಾಗಿ ಸಹಕಾರ ನೀಡುತ್ತಿದೆ. ಸವಿತಾ ಸಮಾಜ ಎಂದೂ ಕಲ್ಪವೃಕ್ಷ ಇದ್ದ ಹಾಗೆ. ಎಲ್ಲ ಸಮಾಜದವರಿಗೂ ಸವಿತಾ ಸಮಾಜ ಬೇಕು. ಸನಾತನ ಧರ್ಮ ಉಳಿಯಬೇಕು ಸವಿತಾ ಸಮಾಜ ಬೆಳೆಯಬೇಕು. ಸಮಾಜದ ಪ್ರತಿಯೊಬ್ಬರೂ ಸಂಘಟನೆಗೆ ಹೆಚ್ಚಿನ ಅಧ್ಯತೆ ನೀಡಬೇಕು ಎಂದು ಹೇಳಿದರು.

  ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸತೀಶ ಕೊಡಿಯಾ ಅಧ್ಯಕ್ಷತೆವಹಿಸಿದ್ದರು. ರಾಘವೇಂದ್ರ ಶಿಕಾರಿಪುರ, ನಾಗೇಶ ಮಹಾಲೆ, ಆನಂದ ಮಹಾಲೆ, ರಾಜೇಶ ಎನ್.ಕೊಡಿಯಾ, ಹನುಮಂತ ಕೆ.ಮಹಾಲೆ, ಪುಟ್ಟು ಭಂಡಾರಿ, ಪ್ರವೀಣ ಐ.ಮಹಾಲೆ, ಗಣಪತಿ ಎನ್.ಮಹಾಲೆ, ಕೆ.ಎನ್.ವೆಂಕಟೇಶ ಇತರರಿದ್ದರು.

  300x250 AD

  ಇದೇ ಸಂದರ್ಭದಲ್ಲಿ ಸವಿತಾ ಸಮಾಜದ ಆಶಾ,ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

  ಚಂದ್ರಶೇಕರ ಎನ್.ಕೊಡಿಯಾ, ಗೀತಾ ಕೊಡಿಯಾ, ಶಿಕ್ಷಕಿ ರಾಧಾ ಕೊಡಿಯಾ ಕಾರ್ಯಕ್ರಮ ನಿರ್ವಹಿಸಿದರು

  Share This
  300x250 AD
  300x250 AD
  300x250 AD
  Leaderboard Ad
  Back to top