• Slide
    Slide
    Slide
    previous arrow
    next arrow
  • ಅರಣ್ಯವಾಸಿಗಳ ಮೇಲೆ ದೌರ್ಜನ್ಯ; ಹೋರಾಟಗಾರರ ವೇದಿಕೆಯಿಂದ ಅರಣ್ಯ ಅಧಿಕಾರಿಯ ಮೇಲೆ ಕಾನೂನು ಕ್ರಮಕ್ಕೆ ಅಗ್ರಹ

    300x250 AD

    ಶಿರಸಿ: ಗದಗ ಜಿಲ್ಲೆಯ, ಮುಂಡರಗಿ ತಾಲೂಕಿನ, ಕೆಳೋರ ಗ್ರಾಮದ ಅರಣ್ಯವಾಸಿಗಳನ್ನ ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಿದ ಹಿನ್ನೆಲೆಯಲ್ಲಿ ನೊಂದ ಅರಣ್ಯವಾಸಿ ನಿರ್ಮಲಾ ಪಾಟೀಲ್ ಆತ್ಮಹತ್ಯೆಮಾಡಿಕೊಂಡ ಘಟನೆ ಜರುಗಿರುವುದು ವಿಷಾದಕರ. ತಕ್ಷಣ ಅರಣ್ಯ ಕರ್ತವ್ಯ ಚ್ಯುತಿವೆಸಗಿದ ಅರಣ್ಯ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು, ತಕ್ಷಣ ಅರಣ್ಯ ಅಧಿಕಾರಿಯನ್ನ ಬಂಧಿಸಬೇಕೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಒತ್ತಾಯಿಸಿದ್ದಾರೆ.

     ಗದಗ ಜಿಲ್ಲೆಯ, ಮುಂಡರಗಿ ತಾಲೂಕಿನ, ಕೆಳೋರ ಗ್ರಾಮದ ಅರಣ್ಯ ಸಿಬ್ಬಂದಿಗಳಿAದ ಉಂಟಾಗಿರುವ ದೌರ್ಜನ್ಯದ ಕುರಿತು ಅವರು ಮೇಲಿನಂತೆ ಪ್ರತಿಕ್ರೀಯಿಸಿದ್ದಾರೆ.

      ಅರಣ್ಯ ಹಕ್ಕು ಕಾಯಿದೆ ಮಂಜೂರಿ ಪ್ರಕ್ರೀಯೆ ಜರುಗುತ್ತಿರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಮೇಲೆ ದೌರ್ಜನ್ಯ ವೆಸಗುವುದು ಖಂಡನಾರ್ಹ ಮತ್ತು ಕಾನೂನು ಬಾಹಿರ ಕೃತ್ಯ. ಕಾನೂನಿನ ವಿಧಿ ವಿಧಾನ ಅನುಸರಿಸದೇ ಒಕ್ಕಲೆಬ್ಬಿಸುವ ಪ್ರಕ್ರೀಯೆ ಕಾನೂನು ಬಾಹಿರ ಕೃತ್ಯವಾಗಿದ್ದು, ಸರ್ವೋಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರಕಾರದ ವಿಧಿ ವಿಧಾನಕ್ಕೆ ವ್ಯತಿರಿಕ್ತವಾಗಿದೆ.

    300x250 AD

    ಸದ್ರಿ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಇನ್ನೋರ್ವ ಮಹಿಳೆ ಸರೋಜಾ ಪಾಟೀಲ್ ಅವರು ಹೆಚ್ಚಿನ ಚಿಕಿತ್ಸೆಗೆ ಸದ್ರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬಲಪ್ರಯೋಗ ಸಮಂಜಸವಲ್ಲ:
    ಮುಗ್ಧ ಅರಣ್ಯವಾಸಿಗಳ ಮೇಲೆ ಬಲಪ್ರಯೋಗದ ಮೂಲಕ ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಕ್ರಮ ಸಮಂಜಸವಲ್ಲ. ಇಂತಹ ಬಲಪ್ರಯೋಗ ಕ್ರೀಯೆಯ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದೆಂದು ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸುತ್ತಾ ಸೂಕ್ತ ಪರಿಹಾರ ನೀಡಲು ಅಗ್ರಹಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top