ಹೊನ್ನಾವರ: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಬೈಕ್ ಸೇತುವೆಯಿಂದ ನದಿಗೆ ಬಿದ್ದ ಘಟನೆ ಹೊನ್ನಾವರದಲ್ಲಿ ಸಂಭವಿಸಿದೆ.
ಭಟ್ಕಳ ದಿಂದ ಹೊನ್ನಾವರದ ಕಡೆಗೆ ಚಲಿಸುತ್ತಿದ್ದ ಕಾರು ಹೊನ್ನಾವರ ದಿಂದ ಕಾಸರಕೋಡ ಕಡೆಗೆ ಚಲಿಸುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರರಿಬ್ಬರು ಶರಾವತಿ ನದಿಗೆ ಬಿದ್ದು ಓರ್ವ ಈಜಿಕೊಂಡು ದಡ ಸೇರಿದ್ದು, ಇನ್ನೊರ್ವ ನಾಪತ್ತೆಯಾಗಿದ್ದಾನೆ.
ಬೈಕ್ ಸವಾರರು ಕಾಸರಕೋಡ ನಿವಾಸಿಗಳು ಎನ್ನುವ ಮಾಹಿತಿ ತಿಳಿದುಬಂದಿದೆ. ನದಿಯಲ್ಲಿ ಬಿದ್ದ ಓರ್ವ ವ್ಯಕ್ತಿಯ ಹುಡುಕಾಟ ಮುಂದುವರೆದಿದ್ದು ಹೊನ್ನಾವರ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.