ಶಿರಸಿ: ದೊಡ್ಡಬಳ್ಳಾಪುರದಲ್ಲಿ ಮಾ. 4ರಿಂದ 6ರವರೆಗೆ ಸಂಘಟಿಸಲಾಗಿದ್ದ ರಾಜ್ಯಮಟ್ಟದ ಕೇರಂ ಪಂದ್ಯಾವಳಿಯಲ್ಲಿ ಶಿರಸಿಯ ಸ್ಪೂರ್ತಿ ಕೇರಂ ಅಸೋಸಿಯೇಷನ್(ದೇವಿಕೆರೆ) ತರಬೇತುದಾರ ಮತ್ತು ರಾಷ್ಟ್ರೀಯ ಕೇರಂ ನಿರ್ಣಾಯಕ ಚಂದ್ರು ಭಟ್ ಅಂತೆಯೇ ಮಣಜವಳ್ಳಿಯ ಸ.ಕಿ.ಪ್ರಾ. ಶಾಲೆಯ ಶಿಕ್ಷಕಿ ಶಾಲಿನಿ ಪ್ರತ್ಯೇಕ ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹಿರಿಯರ(Veterans) ವಿಭಾಗದಲ್ಲಿ ಚಂದ್ರಶೇಖರ ಭಟ್ ಹಾಗೂ ಮಹಿಳೆಯರ ವಿಭಾಗದಲ್ಲಿ ಶಾಲಿನಿ ಚಂದ್ರಶೇಖರ ಭಟ್ ದ್ವಿತೀಯ ಸ್ಥಾನ ಪಡೆದ ಸಾಧನೆಯ ಮೂಲಕ ಶಿರಸಿಗೆ ಕೀರ್ತಿಯನ್ನು ತಂದಿದ್ದು ಇದಕ್ಕಾಗಿ ಉ.ಕ. ಜಿಲ್ಲಾ ಕೇರಂ(ಥಂಬ್) ಆಟಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷ ರವಿ ಹೆಗಡೆ ಗಡಿಹಳ್ಳಿ ಅಭಿನಂದಿಸಿದ್ದಾರೆ.