ಶಿರಸಿ: “ಮಿಂಚಿ ಮರೆಯಾದವಳು” ವಿನಾಯಕ ಹೆಗಡೆ ಅವರ ಎರಡನೇ ಕೃತಿಯಾಗಿದ್ದು ಇದೀಗ ಮಾರಾಟಕ್ಕೆ ಸಿದ್ಧಗೊಂಡಿದೆ. ಈ ಕೃತಿಯ ಮಾರಾಟದಿಂದ ಬಂದ ಹಣವನ್ನು ಹಂಸ ಸೇವಾ ಟ್ರಸ್ಟ್ ಮೂಲಕ ಶಿರಸಿಯಲ್ಲಿ ಲತಿಕಾ ಭಟ್ ನಡೆಸುತ್ತಿರುವ ವೃದ್ಧಾಶ್ರಮದ ವೃದ್ಧರ ನೆರವಿಗೆ ಬಳಸಲು ನಿರ್ಧರಿಸಲಾಗಿದೆ.
ಶಿರಸಿಯ ವಿನಾಯಕ ಹೆಗಡೆ ಕೃಷ್ಣಮೂರ್ತಿ ಹೆಬ್ಬಾರ್ ಪ್ರಧಾನ ಸಂಪಾದಕತ್ವದಲ್ಲಿ ಹೊನ್ನಾವರದಿಂದ ಪ್ರಸಾರವಾಗುವ “ನಾಗರಿಕ” ಪತ್ರಿಕೆಯ ಶಿರಸಿ ವರದಿಗಾರರಾಗಿದ್ದಾರೆ. ಅವರ ಚೊಚ್ಚಲ ಕೃತಿ “ಬಾಳ್ನೋಟ” ಕಳೆದೆರಡು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ನಡೆಸುವ ಮಹಾದೇವ ಭಟ್ಟ ಕೂರ್ಸೆ ಕಿವುಡು ಮಕ್ಕಳ ಶಾಲೆಯಲ್ಲಿ ಅನಾವರಣಗೊಂಡಿತ್ತು. ಕೃತಿಯ ಗೌರವ ಪ್ರತಿಯ ಮಾರಾಟದಿಂದ ಬಂದ ಹಣವನ್ನು ಕಿವುಡು ಮತ್ತು ಮೂಕ ಮಕ್ಕಳ ಶಾಲೆಗೆ ದೇಣಿಗೆಯಾಗಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಐವತ್ತಕ್ಕು ಹೆಚ್ಚು ಓದುಗರು ಪ್ರತಿಯನ್ನು ಖರೀದಿಸಿ ಸೇವಾಕಾರ್ಯದಲ್ಲಿ ನೆರವಾಗಿದ್ದರು. ಪುಸ್ತಕ ಖರೀದಿಸಿದವರ ಹೆಸರನ್ನು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಕಟಿಸಲಾಗಿತ್ತು.
“ಮಿಂಚಿ ಮರೆಯಾದವಳು” ಕೃತಿ ಬೇಕಾದವರು 9972382333 ವಿನಾಯಕ ಹೆಗಡೆ ಅವರನ್ನು ಫೋನ್ ಮೂಲಕ ಇಲ್ಲವೇ ವಾಟ್ಸಪ್ ಮೂಲಕ ಸಂಪರ್ಕಿಸಬಹುದು. ಕೃತಿಯನ್ನು ಖರೀದಿಸಿದವರ ಹೆಸರನ್ನು ಹಂಸ ನ್ಯೂಸ್ ಜಾಲತಾಣದಲ್ಲಿ ಫೋಟೋ ಸಹಿತ ಪ್ರಕಟಿಸಲಾಗುವುದು. ಪುಸ್ತಕದ ಮುಖಬೆಲೆ ₹100 ಹಾಗೂ ಅಂಚೆ ವೆಚ್ಚ ಸಹಿತ ಒಂದಕ್ಕಿಂತ ಹೆಚ್ಚು ಕೃತಿಯನ್ನು ಖರೀದಿಸಲು ಅವಕಾಶವಿದೆ. ವೃದ್ಧರ ನೆರವಿಗೆ ಮುಂದಾಗಿರುವ “ಮಿಂಚಿ ಮರೆಯಾದವಳು” ಕೃತಿಯನ್ನು ಖರೀದಿಸಿ ಸಮಾಜಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಹಂಸ ಸೇವಾ ಟ್ರಸ್ಟ್ ಟ್ರಸ್ಟಿ ತನುಜಾ ಹೆಗಡೆ ಮನವಿ ಮಾಡಿದ್ದಾರೆ.