ಶಿರಸಿ:ಪದ್ಮ ಸೇವಾ ಟ್ರಸ್ಟ್‌ನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮೆಜಿಂಗ್ ಪೆಟ್ ಪ್ಲಾನೆಟ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಅನಾಥ ಪ್ರಾಣಿಗಳಿಗೆ ರಕ್ಷಣೆ ಹಾಗೂ ಪುನರ್ವಸತಿಗಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಈಗ ಇಲ್ಲಿ ಶ್ವಾನಗಳಿಗಾಗಿ “ ನಮ್ಮ ಆಸರೆ ” ಎಂಬ ಪ್ರತ್ಯೇಕ ಭಾಗವನ್ನು ದಾನಿಗಳ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದ್ದು, ರವಿವಾರ ದಂದು ಇದರ ಉದ್ಘಾಟನಾ ಸಮಾರಂಭ ನೆರವೇರಿತು.
ದಾನಿಗಳಾದ ಶಿವಮೊಗ್ಗದ ನಾಗರತ್ನ ರಾವ್ ಹಾಗೂ ನೆಲ್ಸನ್ ಡಿಸೋಜಾ ಇವರು ಉದ್ಘಾಟಿಸಿದರು. ಪದ್ಮಾ ಸೇವಾ ಟ್ರಸ್ಟ್‌ನ ಮುಖ್ಯಸ್ಥರಾದ ಸೂರಜ್ ಸಿರ್ಸಿಕರ್ ಇವರು ದಾನಿಗಳ ಉದಾರ ಕೊಡುಗೆಯನ್ನು ಶ್ಲಾಘಿಸಿದರು.