• Slide
    Slide
    Slide
    previous arrow
    next arrow
  • ಮಾ.9ಕ್ಕೆ ಲಯನ್ಸ್ ಕ್ಲಬ್’ಗೆ ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ

    300x250 AD

    ಶಿರಸಿ: ಲಯನ್ಸ್ ಕ್ಲಬ್ ಗೆ ಲಯನ್ಸ್ ಇಂಟರ್ ನ್ಯಾಶನಲ್ ಜಿಲ್ಲೆ 317B ಇದರ ಪ್ರಾಂತಪಾಲರಾದ ಎಂ.ಜೆ.ಎಫ್. ಲಯನ್ ಶ್ರೀಕಾಂತ ಮೋರೆಯವರು ಮಾ.9 ಅಧಿಕೃತ ಭೇಟಿ ನೀಡಲಿದ್ದಾರೆ.

    ಮೂಲತ: ಬೆಳಗಾವಿಯವರಾದ ಇವರು ಶಿಕ್ಷಣ ಮತ್ತು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ ಕೌಟುಂಬಿಕ ಹಿನ್ನೆಲೆಯುಳ್ಳವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಅಪ್ಲೈಡ್ ಜಿಯೋಲಜಿಯಲ್ಲಿ M.Sc ಪದವಿಯನ್ನು ಪಡೆದು ಗೋವಾದ ಮಡಗಾಂವಿನ ಪಾರ್ವತಿಬಾಯಿ ಚೌಗುಲೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

    ಶಿಕ್ಷಣರಂಗದಲ್ಲಿ ಬಹಳಷ್ಟು ಸಾಧನೆ ಮಾಡಿದ ಇವರು ಗೋವಾ ಬೋರ್ಡಿನ ಅಕೆಡೆಮಿಕ್ ಕೌನ್ಸಿಲ್, ಎಕ್ಸೆಕ್ಯೊಟಿವ್ ಕೌನ್ಸಿಲ್ ಸದಸ್ಯರಾಗಿ, ಗೋವಾ ಸರಕಾರವು ನಿಯುಕ್ತ ಮಾಡಿದ ಹಲವಾರು ಉಪ ಸಮಿತಿಗಳಲ್ಲಿ ಕೆಲಸ ಮಾಡಿ ಶೈಕ್ಷಣಿಕ ಮತ್ತು ಕ್ರೀಡೆಗಳ ಔನ್ನತ್ಯವನ್ನು ಹೆಚ್ಚಿಸುವ ಸಲಹೆಗಳನ್ನು ನೀಡಿದ್ದಾರೆ. ಸ್ವತ: ಆಟಗಾರರಾದ ಇವರು ಕಾಲೇಜು ದಿನಗಳಲ್ಲಿ ಕರ್ನಾಟಕದ ಖೋ ಖೋ ತಂಡವನ್ನು ಅನೇಕ ಬಾರಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಅಂತರ ವಿಶ್ವವಿದ್ಯಾಲಯ ಖೋ ಖೋ ಕ್ರೀಡಾಕೂಟದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ತಂಡದ ನಾಯಕತ್ವವನ್ನು ವಹಿಸಿದ್ದರು. ಖೋ ಖೋ ಫೆಡರೇಶನ್ ಆಫ್ ಇಂಡಿಯಾ ಮತ್ತು ಗೋವಾ ಖೋ ಖೋ ಅಸೋಸಿಯೇಷನ್ನಿನ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಈಗ ಮಾಡರ್ನ ಖೋ ಖೋ ಫೆಡರೇಶನ್ ಆಫ್ ಇಂಡಿಯಾ ಮತ್ತು ಇಂಟರ್‍ನ್ಯಾಷನಲ್ ಅಸೋಸಿಯೇಷನ್ ಆಫ್ ಮಾಡರ್ನ ಖೋ ಖೋದ ಕಾರ್ಯದರ್ಶಿಗಳಾಗಿದ್ದಾರೆ. ಗೋವಾ ಯುನಿವರ್ಸಿಟಿಯ ಸ್ಪೋಟ್ರ್ಸ್ ಕೌನ್ಸಿಲ್, ಗೋವಾ ಓಲಿಂಪಿಕ್ ಅಸೋಸಿಯೇಷನ್ ಮತ್ತು ಸ್ಪೋರ್ಟ್ ಆಧಾರಿಟಿ ಆಫ್ ಗೋವಾದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

    1988ರಲ್ಲಿ ಲಯನ್ಸ್ ಕ್ಲಬ್ ಮಡಗಾಂವಿನ ಸದಸ್ಯರಾಗಿ ಸೇರಿ ನಂತರ ಅಧ್ಯಕ್ಷರಾಗಿ ತದನಂತರ ಝೋನ್ ಛೇರ್‍ಪರ್ಸನ್, ರೀಜನ್ ಛೇರ್‍ಪರ್ಸನ್, ಕ್ಯಾಬಿನೆಟ್ ಸೆಕ್ರೆಟರಿಯಾಗಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ.ಲಯನ್ಸ್ ಸಂಸ್ಥೆಯ ಮೂಲಕ ಹಲವಾರು ಸಾಮಾಜಿಕ, ಸಾಂಸ್ಕøತಿಕ ಕೊಡುಗೆಗಳನ್ನು ನೀಡಿದ್ದಲ್ಲದೆ, ಗೋಮಾಂತ ವಿದ್ಯಾನಿಕೇತನ ಮುಂತಾದ ಇನ್ನಿತರ ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸುತ್ತಿದ್ಧಾರೆ.

    300x250 AD

    ಗೋವಾ ಸರಕಾರವು ಗೋವೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು 2010ರಲ್ಲಿ ನೀಡಿ ಸಮ್ಮಾನಿಸಿದೆ. ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯಿಂದ ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಕಳೆದ 40ವರ್ಷಗಳಿಂದ ನಿರಂತರವಾಗಿ ರಕ್ತದಾನ ಮಾಡುತ್ತಿರುವ ಶ್ರೀಕಾಂತ ಮೋರೆಯವರು ಅನುಕರಣೀಯರಾಗಿದ್ದಾರೆ.

    ಲಯನ್ಸ್ ಜಿಲ್ಲೆ 317 ಬಿ ಯಲ್ಲಿ ಗೋವಾದ 43 ಮತ್ತು ಕರ್ನಾಟಕದ 61 ಕ್ಲಬ್‍ಗಳನ್ನು ಅತ್ಯಂತ ದಕ್ಷತೆಯಿಂದ ಮುನ್ನಡೆಸುತ್ತಿದ್ದಾರೆ. ಪತ್ನಿ ಲಯನ್ ಉಜ್ವಲಾ ಮೋರೆಯವರು ಕೂಡ ಸ್ನಾತಕೋತ್ತರ ಪದವೀಧರೆಯಾಗಿದ್ದು, ಜಿಯೊಗ್ರಫಿ ಲೆಕ್ಚರರ್ ಆಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳು – ಚೈತಾಲಿ M.Tec ಮಾಡಿದ್ದು, ಸುಮೇಧಾ M.Scಮಾಡಿದ್ದು ಇಬ್ಬರೂ ಅಸಿಸ್ಟಂಟ್ ಪ್ರೋಫೆಸರ್‍ಗಳಾಗಿ ಕೆಲಸ ಮಾಡುತ್ತಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top