ಸಿದ್ದಾಪುರ: ತಾಲೂಕಿನ ತ್ಯಾಗ್ಲಿ ಸಮೀಪದ ಹಂಗಾರಖಂಡದ ಶ್ರೀ ನಾಗಚೌಡೇಶ್ವರಿ, ನಾಗ ಮತ್ತು ಪರಿವಾರ ದೇವತೆಗಳ 5ನೇ ವರ್ಷದ ವರ್ಧಂತ್ಯುತ್ಸವ, ಸನ್ಮಾನ ಹಾಗೂ ಮಾರುತಿ ಪ್ರತಾಪ ಯಕ್ಷಗಾನ ಮಂಗಳವಾರ ನಡೆಯಿತು.
ವಿ.ವಿನಾಯಕ ಸುಬ್ರಾಯ ಭಟ್ಟ ಭಟ್ಟ ಮತ್ತೀಹಳ್ಳಿ ಹಾಗೂ ವಿನಾಯಕ ಭಟ್ಟ ಕಲ್ಲೆ( ಕೊಳಗಿಬೀಸ್) ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ನಂತರ ಅನ್ನಸಂತರ್ಪಣೆ ಜರುಗಿತು.
ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ:
ಶಿರಸಿ ಎಂಇಎಸ್ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಗಣೇಶ ಶ್ರೀಧರ ಹೆಗಡೆ ಹಂಗಾರಖಂಡ ಅವರನ್ನು ಸನ್ಮಾನಿಸಲಾಯಿತು ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.97 ಅಂಕಪಡೆದ ಮೊನಿಷಾ ರಾಜೇಶ್ವರ ನಾಯ್ಕ ಹಂಗಾರಖಂಡ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭಲ್ಲಿ ಯಕ್ಷಗಾನ ಕಲಾವಿದರಾದ ಶಂಕರ ಭಾಗವತ ಮತ್ತು ಗಣಪತಿ ನಾಯ್ಕ ಕುಮಟಾ ಅವರನ್ನು ಅಭಿನಂದಿಸಲಾಯಿತು.
ನಾಗಚೌಡೇಶ್ವರಿ ಸಮಿತಿ ಅಧ್ಯಕ್ಷ ರಮೇಶ ನಾಯ್ಕ ಅಧ್ಯಕ್ಷತೆವಹಿಸಿದ್ದರು. ಉದ್ಯಮಿ ಉಪೇಂದ್ರ ಪೈ, ಕೆಡಿಸಿಸಿ ಬ್ಯಾಂಕ್ ಹಾಗೂ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನಮನೆ, ನಾಣಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತೀಹಳ್ಳಿ, ಉದ್ಯಮಿ ಆರ್.ಜಿ.ಶೇಟ್ ಕಾನಸೂರು,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸುಬಾಸ್ ನಾಯ್ಕ ಕಾನಸೂರು, ವಿಶ್ವನಾಥ ಹೆಗಡೆ ಹಂಗಾರಖಂಡ, ಗಣಪತಿ ವಿ.ನಾಯ್ಕ ಉಪಸ್ಥಿತರಿದ್ದರು.
ನಟರಾಜ ಹೆಗಡೆ, ವಾಸುದೇವ ನಾಯ್ಕ, ರಮೇಶ ಬಾಳೇಕೈ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಸ್ಥಳೀಯ ಮಕ್ಕಳಿಂದ ಮನರಂಜನೆ ಹಾಗೂ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಹಾಗೂ ಅತಿಥಿ ಕಲಾವಿದರಿಂದ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ, ಶಂಕರ ಭಾಗವತ್, ವಿಘ್ನೇಶ್ವರ ಗೌಡ ಕೆಸರಕೊಪ್ಪ, ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ, ಗಣಪತಿ ನಾಯ್ಕ ಕುಮಟಾ, ಅಶೋಕ ಭಟ್ಟ ಸಿದ್ದಾಪುರ, ಉದಯ ಕಡಬಾಳ, ಸದಾಶಿವ ಮಲವಳ್ಳಿ, ನಾಗೇಂದ್ರ ಮುರೂರು, ಅವಿನಾಶ ಕೊಪ್ಪ, ಮಂಜು ಗೌಡ ವಿವಿಧ ಪಾತ್ರ ನಿರ್ವಹಿಸಿದರು.