ಯಲ್ಲಾಪುರ: ಯಾವುದೇ ಕಲೆಯ ಜೀವಂತಿಕೆಗೆ ಪ್ರೋತ್ಸಾಹ ಮತ್ತು ಕಲೆಯ ಬಗ್ಗೆ ತೋರುವ ಪ್ರೀತಿಯೇ ಮುಖ್ಯ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಭಟ್ಟ ಹೇಳಿದರು.
ಅವರು ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಯಲ್ಲಾಪುರ ಕಲ್ಲೆಶ್ವರ ಶಾಖೆ ವೇದವ್ಯಾಸ ಸಭಾಮಂಟಪದಲ್ಲಿ ಹಮ್ಮಿಕೊಂಡಿದ್ದ ನಾಟ್ಯ ಲಹರಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಉತ್ತಮವಾದ ಕಲೆಯನ್ನು ಪೊಷಿಸಿಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ.ನಿರಂತರವಾಗಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಮಕ್ಕಳಲ್ಲಿರುವ ಸುಪ್ತೆಯನ್ನು ಗುರುತಿಸಿ ಬೆಳಕಿಗೆ ತರುವ ಕಾರ್ಯ ಮಾಡುತ್ತ ಬಂದಿದೆ ಎಂದು ಹೇಳಿದರು.
ಪತ್ರಕರ್ತ ನರಸಿಂಹ ಸಾತೊಡ್ಡಿ ಮಾತನಾಡಿ ಶ್ರೇಷ್ಠವಾದ ನಮ್ಮ ಪ್ರಚೀನತೆಯನ್ನು ಎತ್ತಿಹಿಡಿಯುವ ಕಲೆ ಭರತನಾಟ್ಯವಾಗಿದೆ.ಸ್ವರೂಪಕ್ಕೆ ಧಕ್ಕೆ ಬಾರದ ಹಾಗೇ ಈ ಕಲೆಯನ್ನು ಮುನ್ನೆಡಿಸಿಕೊಂಡು ಹೋಗುವ ಕೆಲಸವಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ ಮನಸ್ಸಿಗೆ ಶಾಂತಿಯನ್ನು ದೇಹಕ್ಕೆ ಆರೋಗ್ಯವನ್ನು ಈ ನೃತ್ಯಕಲೆ ನೀಡುತ್ತದೆ.ನಾವು ಕಲೆಯ ಆರಾಧಕರಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿದ ಕೇಂದ್ರದ ಮುಖ್ಯಸ್ಥೆ ಡಾ.ಸಹನಾ ಪ್ರದೀಪ ಭಟ್ಟ,ವಿನುತಾ ರಾಘವೇಂದ್ರ ಹೆಗಡೆ ಮಾತನಾಡಿದರು.
ಶಿಕ್ಷಕ ರಾಘವೇಂದ್ರ ಹೆಗಡೆ ಸ್ವಾಗತಿಸಿದರು.ಶಿಕ್ಷಕಿ ಮಾದೇವಿ ಗಾಂವ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.ಪ್ರದೀಪ್ ಭಟ್ಟ ಶಿರಸಿ ವಂದಿಸಿದರು.ನಂತರ ಯಲ್ಲಾಪುರ ಹಾಗೂ ಕಲ್ಲೇಶ್ವರ ಶಾಖೆಯ ವಿದ್ಯಾರ್ಥೀಗಳಿಂದ ಭರತನಾಟ್ಯ ಚೌಕಟ್ಟಿನ ನೃತ್ಯಬಂಧಗಳ ಪ್ರದರ್ಶನ ಹಾಗೂ ಡಾ.ಸಹನಾ ಭಟ್ಟ ಮತ್ತು ವಿನುತಾ ರಾಘವೇಂದ್ರ ನಿರ್ದೇಶನದ ವೀರ ಅಭಿಮನ್ಯು ವಿಶೇಷ ನೃತ್ಯರೂಪಕ ಪ್ರದರ್ಶನಗೊಂಡಿತು.