ಯಲ್ಲಾಪುರ: ಮಹಿಳೆಯರಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ. ಆಧುನಿಕತೆಯ ಇಂದಿನ ದಿನಗಳಲ್ಲಿ ಸ್ರ್ತೀ ಸಂಘಟನೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಿದೆ . ಸರ್ಕಾರದ ಯೋಜನೆಗಳಲ್ಲಿ ಮಹಿಳೆಯರಿಗೆ ವೀಶೇಷ ಪಾಲು ನೀಡಲಾಗಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ರವಿವಾರ ಸಂಜೆ ತಾಲೂಕಿನ ವಜ್ರಳ್ಳಿಯಲ್ಲಿ ಜರುಗಿದ ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರು ಕೇವಲ ಅಡುಗೆಮನೆಗೆ ಸೀಮಿತವಾಗದೇ ಹೊರಜಗತ್ತಿನ ಜವಾಬ್ದಾರಿಯ ಹೊರುವಲ್ಲಿ ಸಬಲರಾಗಿದ್ದಾರೆ ಎಂದರು.
ಒಕ್ಕೂಟದ ಅಧ್ಯಕ್ಷೆ ಗಾಯತ್ರೀ ಗಾಂವ್ಕಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ ಅಧ್ಯಕ್ಷೆ ವೀಣಾ ಗಾಂವ್ಕಾರ, ಪಂಚಾಯತ ಉಪಾಧ್ಯಕ್ಷೆ ರತ್ನಾ ಬಾಂದೇಕರ್, ಗ್ರಾ.ಪಂ ಸದಸ್ಯರಾದ ಗಜಾನನ ಭಟ್ಟ ,ಜಿ ಆರ್ ಭಾಗ್ವತ, ಪುಷ್ಪಾ ಆಗೇರ, ತಿಮ್ಮಣ್ಣ ಗಾಂವ್ಕಾರ,ಭಗೀರಥ ನಾಯ್ಕ, ಗಂಗಾ ಕೋಮಾರ , ಲಲಿತಾ ಸಿದ್ಧಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ , ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ , ಪ್ರಮುಖರಾದ ವಿ ಎನ್ ಭಟ್ಟ ನಡಿಗೆಮನೆ, ಸಹಕಾರಿ ಸಂಘದ ವ್ಯವಸ್ಥಾಪಕ ಜಿ.ವಿ.ಭಟ್ಟ ಅಡ್ಕೇಮನೆ, ಅರವಿಂದ ಪೂಜಾರಿ ಒಕ್ಕೂಟಗಳ ವಲಯ ಮೇಲ್ವಿಚಾರಕ ರಾಜಾರಾಮ ವೈದ್ಯ,ತಾಲ್ಲೂಕು ಸಂಯೋಜಕ ಮಂಜಣ್ಣಾ ಕೆ. ಉಪಸ್ಥಿತರಿದ್ದರು.ಒಕ್ಕೂಟದ ಉಪಾಧ್ಯಕ್ಷೆ ಅನ್ನಪೂರ್ಣ ಆರ್. ಭಟ್ಟ ತೇಲಂಗಾರ ವಾರ್ಷಿಕ ವರದಿ ವಾಚಿಸಿದರು.
ಹೇಮಾ ಆಚಾರಿ ಸ್ವಾಗತಿಸಿದರು.ಸಂಗೀತಾ ಗಾಂವ್ಕಾರ, ವೀಣಾ ಹೆಬ್ಬಾರ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಪುಸ್ತಕ ಬರಹಗಾರ್ತಿ ಶರೀಫಾ ಎಂ ಮುಲ್ಲಾ ವಂದಿಸಿದರು.
ಇದೇ ಸಂದರ್ಭದಲ್ಲಿ ಒಕ್ಕೂಟದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರಿಗೆ ಬಹುಮಾನ ನೀಡಲಾಯಿತು. ಅರಣ್ಯ ಇಲಾಖೆಯಿಂದ ನೀಡಿದ ಸಸಿಗಳನ್ನು ಮಹಿಳೆಯರಿಗೆ ಸಚಿವರು ವಿತರಿಸಿದರು. ನಂತರ ಒಕ್ಕೂಟದ ಮಹಿಳೆಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಗಳು ಜರುಗಿದವು.