• Slide
    Slide
    Slide
    previous arrow
    next arrow
  • ಒಕ್ಕಲೆಬ್ಬಿಸದೇ ಭೂಮಿ ಹಕ್ಕಿಗೆ ಪ್ರಮಾಣ ಪತ್ರ ಸಲ್ಲಿಸಲು ಅಗ್ರಹ

    300x250 AD

    ಭಟ್ಕಳ: ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ರಿಪೇರಿ, ಪುನರ್ ನಿರ್ಮಾಣಕ್ಕೆ ಅವಕಾಶ ನೀಡುವುದು, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿಗಳನ್ನು ಪುನರ್ ಪರೀಶಿಲನೆಗೆ ಸರಕಾರ ನಿರ್ಧರಿಸಿರುವುದು, ಪ್ರತೀ ಸೋಮವಾರ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಪ್ರಕ್ರೀಯೆ ಆದೇಶವನ್ನು ಸ್ಥಗಿತಗೊಳಿಸಲು ಸರಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ, ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸದೇ, ಅರಣ್ಯ ಭೂಮಿ ಹಕ್ಕು ವಿತರಣೆಗೆ ನಿರ್ದಿಷ್ಟ ಮಾನದಂಡದ ಅಂಶದ ಪ್ರಮಾಣ ಪತ್ರ ಸಲ್ಲಿಸಲು ಹಾಗೂ ಕಾನೂನಿನಲ್ಲಿ ಉಲ್ಲೇಖಿಸಿದಂತೆ ಮೂರು ತಲೆಮಾರಿನ ನಿರ್ದಿಷ್ಟ ದಾಖಲೆಗೆ ಒತ್ತಾಯಿಸದೇ ಸಾಂದರ್ಭಿಕ ದಾಖಲೆಗಳ ಅಡಿಯಲ್ಲಿ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಒತ್ತಾಯದ ಮೇರೆಗೆ ಹೋರಾಟ ಮುಂದುವರೆಸಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

    ಇಂದು ಭಟ್ಕಳ ತಾಲೂಕಿನಲ್ಲಿ ಅರಣ್ಯವಾಸಿಗಳನ್ನು ಉಳಿಸಿ-ಜಾಥ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

      ಡಿ. ೨೨ ಹಾಗೂ ಫೇ. ೧೭ ರಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಬೆಳಗಾವಿ ಮತ್ತು ಬೆಂಗಳೂರು ವಿಧಾನ ಸೌಧ ಅಧಿವೇಶನದ ಸಂದರ್ಭದಲ್ಲಿ ಜರುಗಿಸಿದ ವಿಧಾನ ಸೌಧ ಚಲೋ ಕಾರ್ಯಕ್ರಮದ ಅಂಗವಾಗಿ ರಾಜ್ಯ ಸರಕಾರ  ನೀಡಿದ ಆಶ್ವಾಸನೆಯಂತೆ ಡಿ. ೨೨ ರಂದು ಬೆಂಗಳೂರಿನಲ್ಲಿ ವಿಧಾನ ಸೌಧ ಅಧೀವೇಶನ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಅರೇಬೈಲ್ ಶಿವರಾಮ್ ಹೇಬ್ಬಾರ್, ಅರಣ್ಯ ಸಚಿವ ಉಮೇಶ ಕತ್ತಿ, ಅವರ ನೇತ್ರತ್ವದಲ್ಲಿ ಜರುಗಿದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ನಡುವಳಿಕೆಯ ಪ್ರತಿಯನ್ನು ಪ್ರದರ್ಶಿಸುತ್ತಾ ಮೇಲಿನಂತೆ ಹೇಳಿದರು.

       ಸರಕಾರ ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾದ ನಿಲುವನ್ನು ಪ್ರಕಟಿಸಬೇಕು ಮತ್ತು ಮೂರು ತಲೆಮಾರಿನ ದಾಖಲೆಗಳು ಇಲ್ಲದೇ ಸಾಂದರ್ಭೀಕ ದಾಖಲೆಗಳ ಆಧಾರದಲ್ಲಿಯೇ ಭೂಮಿ ಹಕ್ಕಿಗೆ ಮಾನದಂಡ ನಿಗದಿಗೊಳಿಸಬೇಕು ಎಂಬ ಅಂಶದ ಮೇಲೆ ಪ್ರಬಲ ಹೋರಾಟವನ್ನು ಅರಣ್ಯ ವಾಸಿಗಳನ್ನು ಉಳಿಸಿ ಜಾಥದ ಮೂಲಕ ಸರಕಾರದ ಮೇಲೆ ಒತ್ತಡ ತರಲಾಗುವುದೆಂದು ಎಂದರು.

      ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾ ಸಂಚಾಲಕರಾದ ದೇವರಾಜ ಗೊಂಡ, ಪ್ರಮುಖರಾದ ಇನಾಯತ್ ಸಾಬಂದ್ರಿ, ಪಾಂಡುರಂಗ ನಾಯ್ಕ ಬೆಳಕೆ, ಕಯುಂ ಸಾಬ, ರಿಜವಾನ್, ಚಂದ್ರು ನಾಯ್ಕ, ಶಬ್ಬೀರ್ ಶೇಕ್, ಮಹಮ್ಮದ ನತಾರ್, ಮುಂತಾದವರು ಉಪಸ್ಥಿತರಿದ್ದರು.

    300x250 AD

    ಭಟ್ಕಳದಲ್ಲಿ ೧೦ ಕ್ಕೆ ಅರಣ್ಯವಾಸಿಗಳನ್ನು ಉಳಿಸಿ- ಜಾಥ ರ‍್ಯಾಲಿ;

    ಭಟ್ಕಳದಲ್ಲಿ ಮಾ. ೧೦ ಅರಣ್ಯವಾಸಿಗಳನ್ನ ಉಳಿಸಿ- ಜಾಥ ಬೃಹತ್ ರ‍್ಯಾಲಿ, ಭಟ್ಕಳ ತಾಲೂಕಿನಲ್ಲಿ ಮಾರ್ಚ ೧೦ ಗುರುವಾರ ಮುಂಜಾನೆ ೧೦ ಗಂಟೆಗೆ ಪ್ರವಾಸಿ ಮಂದಿರದ ಪ್ರವೇಶ ದ್ವಾರದಿಂದ ಭಟ್ಕಳದ ಪ್ರಮುಖ ಬೀದಿಗಳಲ್ಲಿ ಜಾಥ ರ‍್ಯಾಲಿ ಸಂಘಟಿಸಲಾಗಿದ್ದು ವಾಯ್‌ಎಮ್‌ಎಸ್‌ಇ ಕ್ರೀಡಾಂಗಣದಲ್ಲಿನ ಎದುರು ಬಿಲಾಲ್ ಹಾಲ್‌ನಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಹೋರಾಟಗಾರರ ಪ್ರಮುಖರಾಗಿರುವ ಇನಾಯತ ಸಾಬಂದ್ರಿ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top