
ಭಟ್ಕಳ: ಮುಟ್ಟಳ್ಳಿ ಕಡೆಯಿಂದ ಮುಟ್ಟಳ್ಳಿ ಬೈಪಾಸ್ ಕಡೆಗೆ ಯಾವುದೇ ಪಾಸ್ ಪರಮೀಟ್ ಇಲ್ಲದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಸಹೋದರನ್ನು ಭಟ್ಕಳ ನಗರ ಠಾಣೆಯ ಪೆÇಲೀಸರು ಬಂಧಿಸಿದ ಘಟನೆ ನಡೆದಿದೆ.
ಮುಟ್ಟಳ್ಳಿ ನಿವಾಸಿಗಳಾದ ಮಾದೇವ ಮಾಸ್ತಪ್ಪ ನಾಯ್ಕ ಹಾಗೂ ಕೃಷ್ಣ ಮಾಸ್ತಪ್ಪ ನಾಯ್ಕ ಬಂಧಿತ ಆರೋಪಿಗಳು. ವದೆ ಮಾಡುವ ಉದ್ದೇಶದಿಂದ 40 ಸಾವಿರ ಮೌಲ್ಯದ ಎರಡು ಕೋಣಗಳನ್ನು ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಸಾಗಾಟ ಮಾಡುತ್ತಿದ್ದಾಗ ಕೋಣಗಳ ಸಮೇತ ಆರೋಪಿಗಳನ್ನು ನಗರ ಠಾಣೆಯ ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬೆನ್ನೆಲ್ಲೆ ಒಂದು ವರ್ಷದಿಂದ ಮುಟ್ಟಳ್ಳಿ ಭಾಗದಲ್ಲಿ ಜಾನುವಾರು ಕಳ್ಳತನವಾಗುತ್ತಿತ್ತು ಎಂದು ಇಲ್ಲಿನ ಸಾರ್ವಜನಿಕರು ಆರೋಪಿಸಿದ್ದು, ಒಂದೇ ಮನೆಯಿಂದ 2 ಜಾನುವಾರು ಕಳ್ಳತನವಾದ ಉದಾಹರಣೆಗಳು ಕೂಡ ಇರುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.